ಮೈಸೂರಿನಲ್ಲಿಂದು 365 ಮಂದಿಗೆ ಕೊರೋನ ಸೋಂಕು: 9 ಮಂದಿ ಸಾವು
ಮೈಸೂರು,ಆ.1: ಮೈಸೂರಿನಲ್ಲಿ ಶನಿವಾರ 365 ಮಂದಿಗೆ ಕೊರೋನ ಸೂಂಕು ದೃಢಪಟ್ಟಿದ್ದು, ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ.
ರ್ಯಾಪಿಡ್ ಟೆಸ್ಟ್ ಹಿನ್ನಲೆಯಲ್ಲಿ ಇಂದು 365 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಇದುವರೆಗೆ ಒಟ್ಟು 4582 ಮಂದಿಗೆ ಕೊರೋನ ಸೋಂಕು ತಗಲಿದೆ.
ಇಂದು 74 ಮಂದಿ ಕೊರೋನ ಸೋಂಕಿತರು ಗುಣಮುಖರಾಗಿದ್ದು, ಈವರೆಗೆ ಒಟ್ಟು 1591 ಮಂದಿ ಗುಣಮುಖರಾಗಿದ್ದಾರೆ. ಒಂದೇ ದಿನ ಒಂಬತ್ತು ಮಂದಿ ಸಾವನ್ನಪ್ಪಿದ್ದು, ಇದುವರೆಗೆ ಒಟ್ಟು151 ಮಂದಿ ಕೊರೋನ ಸೋಂಕಿಗೆ ಅಸುನೀಗಿದ್ದಾರೆ.
Next Story