ಹನೂರು: ಭಾರೀ ಗಾಳಿ; ಮನೆಗೆ ಹಾನಿ
ಹನೂರು: ಭಾರೀ ಗಾಳಿಗೆ ಮನೆಯ ಮೇಲ್ಚಾವಣಿ ಹಾರಿಹೋಗಿ ದಿನಬಳಕೆ ವಸ್ತುಗಳು ಹಾನಿಯಾಗಿರುವ ಫಟನೆ ಹನೂರು ತಾಲ್ಲೂಕಿನ ಹುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಪೋಡು ಗ್ರಾಮದಲ್ಲಿ ನಡೆದಿದೆ.
ಹೂಸಪೊಡು ಗ್ರಾಮದ ರತ್ನಮ್ಮ ಎಂಬವರಿಗೆ ಸೇರಿದ ಮನೆಯು ಗಾಳಿಯ ರಭಸಕ್ಕೆ ಹಾನಿಗೊಳಗಾಗಿದೆ. ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಭಾರೀ ಗಾಳಿ ಮತ್ತು ಮಳೆ ಹೆಚ್ಚಾಗಿದ್ದು ಮುಂಜಾನೆ ಬೀಸಿದ ಗಾಳಿಯ ರಭಸಕ್ಕೆ ಮೆನೆಯ ಮೇಲ್ಛಾವಣಿಯ ಸೀಟುಗಳು ಹಾನಿಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.
ಸುಮಾರು 40 ಸಾವಿರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
Next Story