ಸೆ.21ರಿಂದ ಎಸೆಸೆಲ್ಸಿ ಪೂರಕ ಪರೀಕ್ಷೆ; ವೇಳಾಪಟ್ಟಿ ಪ್ರಕಟ
ಸಾಂದರ್ಭಿಕ ಚಿತ್ರ
ಬೆಂಗಳೂರು, ಆ.21: ಕೊರೋನ ಸೋಂಕು ಅಧಿಕಗೊಳ್ಳುತ್ತಿದ್ದ ಸಂದರ್ಭದಲ್ಲಿ ಸರಕಾರ ಪರೀಕ್ಷೆ ಆಯೋಜಿಸಿದ್ದರಿಂದ ಅನೇಕ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿಲ್ಲ. ಇದೀಗ ಎಸೆಸೆಲ್ಸಿ ಪೂರಕ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದ್ದು, ಪರೀಕ್ಷೆ ಬರೆಯದವರು ಹಾಗೂ ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದಾಗಿದೆ.
ಎಸೆಸೆಲ್ಸಿ ಪೂರಕ ಪರೀಕ್ಷೆಗಳು ಸೆ.21 ರಿಂದ ಆರಂಭವಾಗಲಿದ್ದು, ಸೆ.28 ರವರೆಗೆ ನಡೆಯಲಿದೆ. ಮುಖ್ಯ ಪರೀಕ್ಷೆಯಲ್ಲಿ ಪರೀಕ್ಷೆಗೆ ಹಾಜರಾಗದವರು ಈ ಪೂರಕ ಪರೀಕ್ಷೆಯಲ್ಲಿ ಪರೀಕ್ಷೆ ಬರೆದರೆ ಅವರನ್ನು ಫ್ರೆಶರ್ ಎಂದು ಪರಿಗಣಿಸಲಾಗುತ್ತದೆ.
ವೇಳಾಪಟ್ಟಿ:
ಸೆ.21 : ಗಣಿತ ಮತ್ತು ಸಮಾಜ
ಸೆ.22 : ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಸಂಸ್ಕೃತ (ಪ್ರಥಮ ಭಾಷೆ)
ಸೆ.23 : ಸಮಾಜ ವಿಜ್ಞಾನ
ಸೆ.24 : ಇಂಗ್ಲಿಷ್, ಕನ್ನಡ ( ದ್ವಿತೀಯ ಭಾಷೆ)
ಸೆ.25 : ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪಾರ್ಸಿ, ಉರ್ದು, ಸಂಸ್ಕೃತ , ಕೊಂಕಣಿ, ತುಳು (ತೃತೀಯ ಭಾಷೆ)
ಸೆ.28 : ವಿಜ್ಞಾನ
Next Story