ಸೆ.10ರಿಂದ ಬೆಂಗಳೂರಿನಿಂದ ಪಣಜಿಗೆ ನಾನ್ ಎಸಿ ಸ್ಲೀಪರ್ ಬಸ್ ಸಂಚಾರ
ಬೆಂಗಳೂರು, ಸೆ.8: ಕೆಎಸ್ಸಾರ್ಟಿಸಿ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನಿಂದ ಚಿತ್ರದುರ್ಗ, ಹುಬ್ಬಳಿ ಮತ್ತು ಕಾರವಾರ ಮಾರ್ಗದಲ್ಲಿ ಪಣಜಿಗೆ ನಾನ್ ಎಸಿ ಸ್ಲೀಪರ್ ಸಾರಿಗೆ ಬಸ್ ಸೆ.10ರಿಂದ ಕಾರ್ಯಾಚರಣೆ ಮಾಡಲಿದೆ.
ಸೆ.10ರಿಂದ ಪ್ರತಿದಿನ ಸಂಜೆ 6.30ಕ್ಕೆ ನಾನ್ ಎಸಿ ಸ್ಲೀಪರ್ ಬಸ್ ಬೆಂಗಳೂರಿನಿಂದ ಕಾರ್ಯಾಚರಣೆ ನಡೆಸಲಿದೆ. ಹಾಗೆಯೇ ಪಣಜಿಯಿಂದ ಬೆಂಗಳೂರಿಗೆ ಪ್ರತಿದಿನ ಸಂಜೆ 5.30ಕ್ಕೆ ಹೊರಡಲಿದೆ. ಟಿಕೆಟ್ ದರವು ಒಬ್ಬರಿಗೆ 960ರೂ. ಆಗಿದೆ ಎಂದು ಕೆಎಸ್ಸಾರ್ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
Next Story