ಶಿವಮೊಗ್ಗ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ; ಮೂವರು ಮೃತ್ಯು
ಶಿವಮೊಗ್ಗ: ವಿದ್ಯುತ್ ಕಂಬಕ್ಕೆ ಟಾಟಾ ಇಂಡಿಕಾ ಕಾರು ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಮೃತಪಟ್ಟ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗರ್ತಿಕೆರೆ ಸಮೀಪ ಈ ಘಟನೆ ನಡೆದಿದೆ. ಮೃತರನ್ನು ಕಲಾವತಿ (65), ಲೋಹಿತ್ (36), ಶಶಾಂಕ್ (10) ಎಂದು ಗುರುತಿಸಲಾಗಿದೆ.
ಕಾರು ಧರ್ಮಸ್ಥಳದಿಂದ ರಿಪ್ಪನ್ ಪೇಟೆಗೆ ವಾಪಸ್ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ರಿಪ್ಪನ್ ಪೇಟೆಯ ನಿವಾಸಿಗಳಾದ ಇವರು ಧರ್ಮಸ್ಥಳಕ್ಕೆ ತೆರಳಿದ್ದರು.
ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
Next Story