ಕಡೂರು: ಮನೆಯಲ್ಲಿ ಗಾಂಜಾ ದಾಸ್ತಾನು ಪತ್ತೆ; ಆರೋಪಿ ತಂದೆ-ಮಗಳ ಬಂಧನ
ಚಿಕ್ಕಮಗಳೂರು, ಸೆ.25: ಮನೆಯಲ್ಲಿ ಗಾಂಜಾ ದಾಸ್ತಾನಿರಿಸಿದ ಆರೋಪದಲ್ಲಿ ತಂದೆ-ಮಗಳನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ.
ಕಡೂರು ಪಟ್ಟಣದ ಈದ್ಗಾ ನಗರ ನಿವಾಸಿಗಳಾದ ವಿಜಯಮ್ಮ(40) ಅವರ ತಂದೆ ಜಯಣ್ಣ (65) ಬಂಧಿತ ಆರೋಪಿಗಳು ಬಂಧಿತ ಆರೋಪಿಗಳಾಗಿದ್ದಾರೆ.
ಇವರ ಮನೆಗೆ ಕಡೂರು ಪಿಎಸ್ಸೈ ವಿಶ್ವನಾಥ್ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿದೆ. ಈ ವೇಳೆ 960 ಗ್ರಾಂ ಗಾಂಜಾ ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Next Story