ಮಾಸ್ಕ್ ಇಲ್ಲದೆ ಸಂಚಾರ: 1.32 ಲಕ್ಷ ರೂ. ದಂಡ ವಿಧಿಸಿದ ಪೊಲೀಸರು
ಮೈಸೂರು,ಸೆ.26: ಮಾಸ್ಕ್ ಇಲ್ಲದೆ ಸಂಚರಿಸುವ ಸಾರ್ವಜನಿಕರ ಮೇಲೆ ದಂಡ ವಿಧಿಸುವ ಕಾರ್ಯಾಚರಣೆ ಮುಂದುವರಿಸಿರುವ ಪೊಲೀಸರು ನಿನ್ನೆ ಕೂಡ 1.32 ಲಕ್ಷರೂ.ದಂಡ ಸಂಗ್ರಹಿಸಿದ್ದಾರೆ.
ನಗರ ಪೊಲೀಸರು ನಿನ್ನೆ ಕೂಡ ಬಿರುಸಿನ ಕಾರ್ಯಾಚರಣೆ ನಡೆಸಿದ್ದು ಮಾಸ್ಕ್ ಇಲ್ಲದೆ ಸಂಚರಿಸುತ್ತಿದ್ದ 661 ಮಂದಿಯಿಂದ 1.32 ಲಕ್ಷರೂ ದಂಡ ಸಂಗ್ರಹಿಸಿದ್ದಾರೆ. ಸಿದ್ದಾರ್ಥ ನಗರ ಸಂಚಾರಿ ಠಾಣೆಯ ಪೊಲೀಸರು ಅತ್ಯಧಿಕ 14,600 ಹಾಗೂ ನಜರ್ ಬಾದ್ ಪೊಲೀಸರು 12,800 ದಂಡ ವಿಧಿಸಿದ್ದಾರೆ.
ದಂಡ ಪಾವತಿಗೆ ಬದಲಾಗಿ ಅದೇ ಹಣದಲ್ಲಿ ಮಾಸ್ಕ್ ಖರೀದಿಸಿ ಧರಿಸಿ ಸಂಚರಿಸುವಂತೆ ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ಸಲಹೆ ನೀಡಿದ್ದಾರೆ.
Next Story