ಸಾಲಬಾಧೆ: ವಿದ್ಯುತ್ ಮಗ್ಗದ ಮುಂದೆಯೇ ನೇಕಾರ ಆತ್ಮಹತ್ಯೆ
ಬೆಳಗಾವಿ, ಅ.1: ಸಾಲಬಾಧೆ ಹಿನ್ನೆಲೆಯಲ್ಲಿ ವಿದ್ಯುತ್ ಮಗ್ಗದ ಮುಂದೆಯೇ ನೇಕಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ಗುರುವಾರ ನಡೆದಿದೆ.
ದೇವಾಂಗ ನಗರದ ನಿವಾಸಿ ಸಂತೋಷ್ ಢಗೆ(39) ಆತ್ಮಹತ್ಯೆ ಮಾಡಿಕೊಂಡ ನೇಕಾರ. ನೇಕಾರ ಸಂತೋಷ್ ಇತ್ತೀಚೆಗೆ ಸಾಲ ಮಾಡಿ 2 ವಿದ್ಯುತ್ ಮಗ್ಗ ಖರೀದಿ ಮಾಡಿದ್ದರು. ಲಾಕ್ಡೌನ್ ಹಿನ್ನೆಲೆಯಲ್ಲಿ ಮಾಡಿದ್ದ ಸಾಲ ತೀರಿಸಲಾಗದೆ ಸಂಕಷ್ಟ ಎದುರಿಸಿದ್ದರು. ಕುಟುಂಬ ನಿರ್ವಹಣೆ ಮಾಡಲಾಗದೆ, ಸಾಲ ತೀರಿಸಲಾಗದೆ ಸಾಲಗಾರರ ಕಾಟಕ್ಕೆ ಮನನೊಂದು ನೇಣಿಗೆ ಶರಣಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಪತ್ನಿ, ಮಕ್ಕಳು ತವರು ಮನೆಗೆ ಹೋಗಿದ್ದ ವೇಳೆ ನೇಕಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಸಂತೋಷ್ಗೆ ಐದು ವರ್ಷದ ಗಂಡು ಮಗು ಹಾಗೂ ಮೂರು ವರ್ಷದ ಹೆಣ್ಣು ಮಗುವಿದೆ. ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Next Story