ವಿದ್ಯುತ್ ತಂತಿ ತಗುಲಿ ಯುವಕನಿಗೆ ಗಂಭೀರ ಗಾಯ
ಭಟ್ಕಳ, ಮೇ 19: ತಾಲೂಕಿನ ಸುಲ್ತಾನ್ ಸ್ಟ್ರೀಟ್ನ ಮನೆಯೊಂದರಲ್ಲಿ ಟೈಲ್ಸ್ ಜೋಡಿಸುತ್ತಿದ್ದ ವೇಳೆ ಕಾರ್ಮಿಕನೋರ್ವನಿಗೆ ವಿದ್ಯುತ್ ಶಾಕ್ ತಗುಲಿದ ಘಟನೆ ಶುಕ್ರವಾರ ನಡೆದಿದೆ.
ಗಾಯಗೊಂಡ ಯುವಕನನ್ನು ರಾಜಸ್ತಾನದ ಕರಾವಳಿ ಜಿಲ್ಲೆಯ ಮನ್ರೂಪ್ ಕೆವೊಟ್ಟಿ(18) ಎಂದು ಗುರುತಿಸಲಾಗಿದೆ. ಘಟನೆಯಿಂದ ಮನ್ರೂಪ್ ನ ಎಡಗೈ ಸುಟ್ಟು ಹೋಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಈ ಬಗ್ಗೆ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story