ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಚಿಕ್ಕಮಗಳೂರು, ಮೇ 27: ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ 2ನೆ ರಾಷ್ಟ್ರಮಟ್ಟದ ಮಾರ್ಷಿಯಲ್ ಆರ್ಟ್ಗೇಮ್ಸ್ 2017ರಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿ ಸಿದ ಚಿಕ್ಕಮಗಳೂರು ಜಿಲ್ಲೆಯ ಶೋಟೋಕಾನ್ ಮಾರ್ಷಿಯಲ್ ಆರ್ಟ್ಸ್ ಅಕಾಡಮಿ ಮತ್ತು ಸ್ಕೂಲ್ ಆಫ್ ಸೆಲ್ಫ್ ಡಿಫೆನ್ಸ್ನ ತಂಡವು ಭಾಗವಹಿಸಿತ್ತು.
ಈ ಮೂಲಕ ಸೆಪ್ಟೆಂಬರ್ 4 ರಿಂದ 11 ರ ವರೆಗೆ ಅಮೆರಿಕಾದ ಫ್ಲೋರಿಡದಲ್ಲಿ ನಡೆಯಲಿರುವ ಅಂತಾ ರಾಷ್ಟ್ರೀಯ ಮಟ್ಟದ 11ನೇ ವರ್ಲ್ದ್ ಮಾರ್ಷಿಯಲ್ ಆರ್ಟ್ಸ್ ಗೇಮ್ಸ್ 2017ನಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾರೆ ಎಂದು ಶಾಲೆಯ ಮುಖ್ಯಸ್ಥ ಶಿಹಾನ್ ಪ್ರವೀಣ್. ಎಂ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story