ಮುಂಡಗೋಡ: ತಾಯಿ, ಮಗು ನಾಪತ್ತೆ
ಮುಂಡಗೋಡ, ಮೇ 27: ಪತ್ನಿ ಮತ್ತು ಮಗಳು ಕಾಣೆಯಾಗಿದ್ದಾರೆ ಎಂದು ಮನೋಜ್ ಪಾಟೀಲ್ ಎಂಬವರು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಿಸಿದ್ದಾರೆ. ತನ್ನ ಪತ್ನಿ ನಗೀನಾ ಮನೋಜ ಪಾಟೀಲ್(23) ಹಾಗೂ ಪುತ್ರಿ ಖುಷಿ ಮನೋಜ ಪಾಟೀಲ್(3) ಮೇ 21ರಂದು ಮನೆಯಲ್ಲಿ ಯಾರಿಗೂ ಹೇಳದೆ ಹೋಗಿದ್ದು, ಇದುವರೆಗೂ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. ಸ್ನೇಹಿತರು, ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿದರೂ ಪತ್ನಿ ಮತ್ತು ಮಗಳು ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
Next Story