ತಾಯಿ ಮಗಳು ನಾಪತ್ತೆ
ಮೂಡಿಗೆರೆ, ಆ.14: ಪಟ್ಟಣದ ಸಮೀಪದ ಬಿಳಗುಳ ಗ್ರಾಮದ ರೆಹಮಾನ್ ಎಂಬವರ ಎರಡನೆ ಪುತ್ರಿ ಬಿ.ಬಿ.ಸಮೀದಾ (26) ಮೊಮ್ಮಗಳು ಹನೀನಾ(4)ಳೊಂದಿಗೆ ಆ.6ರಂದು ಮೂಡಿಗೆರೆ ಪಟ್ಟಣಕ್ಕೆ ಹೋಗಿ ಬರುತ್ತೇನೆಂದು ಹೋದವರು ವಾಪಾಸು ಬರದೇ ನಾಪತ್ತೆಯಾಗಿದ್ದಾರೆ. ಸಮೀದಾ ಇವರನ್ನು ಚಿಕ್ಕಮಗಳೂರಿನ ಹನೀಫ್ ಎಂಬವರಿಗೆ 8 ವರ್ಷದ ಹಿಂದೆ ವಿವಾಹ ಮಾಡಿಕೊಡಲಾಗಿದೆ. ಮನೆಯಲ್ಲಿ ಅಳಿಯ ಮತ್ತು ಮಗಳು ಮೊಮ್ಮಗಳೊಂದಿಗೆ ವಾಸವಾಗಿದ್ದರು. ಆ.6ರಂದು ಮೂಡಿಗೆರೆ ಪಟ್ಟಣಕ್ಕೆ ಹೋಗುವುದಾಗಿ ಹೇಳಿ ಮಗುವಿನೊಂದಿಗೆ ಸಮೀದಾ ತೆರಳಿದ್ದು, ವಾಪಾಸು ಬಂದಿಲ್ಲ.
ಮೊಬೈಲ್ ಕೂಡ ಸ್ವಿಚ್ ಅಫ್ ಆಗಿದ್ದು, ಸ್ನೇಹಿತರು ಮತ್ತು ನೆಂಟರ ಮನೆಗಳಲ್ಲಿ ವಿಚಾರಿಸಿದ್ದರೂ ಎಲ್ಲಿಯೂ ಕಂಡು ಬಂದಿಲ್ಲ. ಕಣ್ಮರೆಯಾಗಿರುವ ಬಿ.ಬಿ.ಸಮೀದಾ ಮತ್ತು ಹನೀನಾಳನ್ನು ಹುಡುಕಿಕೊಡುವಂತೆ ರೆಹಮಾನ್ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Next Story