ದಾಂಡೇಲಿ: ಓ.ಸಿ. ಜುಗಾರಾಟ ವ್ಯಕ್ತಿಯೋರ್ವನ ಬಂಧನ
ಮುಂಡಗೋಡ (ದಾಂಡೇಲಿ), ಆ. 19: ಸಾರ್ವಜನಿಕರ ಸ್ಥಳದಲ್ಲಿ ಓಸಿ ಆಡಿಸುತ್ತಿದ್ದವನನ್ನು ಪೊಲೀಸರು ಬಂಧಿಸಿದ ಘಟನೆ ಪಟ್ಟಣದ ದಾಂಡೇಲಿ ನಗರದ ಸೋಮಾನಿ ಸರ್ಕಲ್ ಹತ್ತಿರ ಸಾರ್ವಜನಿಕರ ರಸ್ತೆಯಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಸುಭಾಸನಗರದ ಅಸ್ಲಂ ನೀರಲಗಿ ಎಂದು ಹೇಳಲಾಗಿದ್ದು.
ಈತ ಸಾರ್ವಜನಿಕರ ಸ್ಥಳದಲ್ಲಿ ತನ್ನ ಲಾಭಕ್ಕೊಸ್ಕರ ಓಸಿ ಆಡಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂದಿಸಿದ್ದಾರೆ. ಬಂದಿತನಿಂದ 922 ರೂ. ನಗದು ಹಾಗೂ ಆಟಕ್ಕೆ ಬಳಸಿದ ಪರಿಕರಗಳನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿದ್ದಾರೆ.
Next Story