ಮಾಜಿ ಬೆಲ್ಜಿಯಂ ಸ್ಟ್ರೈಕರ್ ಜೊಸಿಪ್ ವೆಬೆರ್ ನಿಧನ
ಬ್ರುಸ್ಸೆಲ್ಸ್, ನ.8: 1994ರ ವಿಶ್ವಕಪ್ನಲ್ಲಿ ಆಡಿದ್ದ ಬೆಲ್ಜಿಯಂನ ಮಾಜಿ ಸ್ಟ್ರೈಕರ್ ಜೊಸಿಪ್ ವೆಬೆರ್(52 ವರ್ಷ)ದೀರ್ಘಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ವೆಬೆರ್ ಕಳೆದ ಕೆಲವು ತಿಂಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಕ್ರೊಯೇಷಿಯದಲ್ಲಿ ಜನಿಸಿದ್ದ ವೆಬೆರ್ ಬೆಲ್ಜಿಯಂಗೆ ಬರುವ ಮೊದಲು ಕ್ರೊಯೇಷಿಯ ಪರ ಕೆಲವು ಪಂದ್ಯ ಆಡಿದ್ದರು. ವೆಬೆರ್ 8 ಅಂತಾರಾಷ್ಟ್ರೀಯ ಪಂದ್ಯದಲ್ಲಿ 6 ಗೋಲುಗಳನ್ನು ಬಾರಿಸಿದ್ದರು.
ಅಮೆರಿಕದಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ ಜರ್ಮನಿ ವಿರುದ್ಧ ವಿವಾದಾತ್ಮಕ ಪೆನಾಲ್ಟಿ ಘಟನೆಯಲ್ಲಿ ಶಾಮೀಲಾಗಿದ್ದರು. ಬೆಲ್ಜಿಯಂ ಎರಡನೆ ಸುತ್ತಿನ ಪಂದ್ಯವನ್ನು 3-1 ಅಂತರದಿಂದ ಸೋತಿತ್ತು.
Next Story