ಮೊದಲ ಟೆಸ್ಟ್: ಶ್ರೀಲಂಕಾಕ್ಕೆ 231 ರನ್ ಗುರಿ
ವಿರಾಟ್ ಕೊಹ್ಲಿ 18ನೆ ಶತಕ
ಕೋಲ್ಕತಾ, ನ.20: ನಾಯಕ ವಿರಾಟ್ ಕೊಹ್ಲಿ ಸಿಡಿಸಿದ 18ನೆ ಶತಕ(ಅಜೇಯ 104,119 ಎಸೆತ) ನೆರವಿನಿಂದ ಭಾರತ ತಂಡ ಮೊದಲ ಟೆಸ್ಟ್ನಲ್ಲಿ ಶ್ರೀಲಂಕಾದ ಗೆಲುವಿಗೆ 231 ರನ್ ಗುರಿ ನೀಡಿದೆ.
ಐದನೆ ಹಾಗೂ ಅಂತಿಮ ದಿನವಾದ ಸೋಮವಾರ 1 ವಿಕೆಟ್ಗಳ ನಷ್ಟಕ್ಕೆ 171 ರನ್ನಿಂದ ಎರಡನೆ ಇನಿಂಗ್ಸ್ ಮುಂದುವರಿಸಿದ ಭಾರತ 88.4 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 352 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
88.4ನೆ ಓವರ್ನಲ್ಲಿ ಲಕ್ಮಲ್ ಎಸೆತವನ್ನು ಸಿಕ್ಸರ್ಗೆ ಅಟ್ಟಿದ ವಿರಾಟ್ ಕೊಹ್ಲಿ 50ನೆ ಅಂತಾರಾಷ್ಟ್ರೀಯ ಶತಕವನ್ನು ತನ್ನದೇ ಶೈಲಿಯಲ್ಲಿ ಪೂರೈಸಿದರು.
ಟೆಸ್ಟ್ನಲ್ಲಿ 18ನೆ ಶತಕ ಪೂರೈಸಿರುವ ಕೊಹ್ಲಿ ಭಾರತದ ನಾಯಕನಾಗಿ 11ನೇ ಶತಕ ಸಿಡಿಸಿರುವ ಸಾಧನೆ ಮಾಡಿದ್ದಾರೆ.
119 ಎಸೆತಗಳನ್ನು ಎದುರಿಸಿರುವ ಕೊಹ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್ಗಳ ಸಹಿತ ಅಜೇಯ 104 ರನ್ ಗಳಿಸಿದರು.
73 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ರಾಹುಲ್(79)ನಿನ್ನೆಯ ಮೊತ್ತಕ್ಕೆ ಕೇವಲ 6 ರನ್ ಗಳಿಸಿ ಔಟಾದರು. ಚೇತೇಶ್ವರ ಪೂಜಾರ 22 ರನ್ಗೆ ಹೋರಾಟ ಮುಗಿಸಿದರು. ಆಗ ಏಕಾಂಗಿ ಹೋರಾಟ ನೀಡಿದ ಕೊಹ್ಲಿ ಭಾರತ ಎರಡನೆ ಇನಿಂಗ್ಸ್ನಲ್ಲಿ 352 ರನ್ ಗಳಿಸಲು ನೆರವಾದರು.
ಗೆಲ್ಲಲು ಕಠಿಣ ಸವಾಲು ಪಡೆದಿರುವ ಶ್ರೀಲಂಕಾ 7 ಓವರ್ಗಳಲ್ಲಿ 8 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ಗಳನ್ನು ಕಳೆದುಕೊಂಡಿದೆ. ಪಂದ್ಯ ಡ್ರಾದತ್ತ ಮುಖ ಮಾಡಿದೆ.