ಡಿಮಿಟ್ರೊವ್ಗೆ ಎಟಿಪಿ ಫೈನಲ್ಸ್ ಟ್ರೋಫಿ
ಲಂಡನ್, ನ.20: ಡೇವಿಡ್ ಗೊಫಿನ್ರನ್ನು ಮಣಿಸಿದ ಗ್ರಿಗೊರ್ ಡಿಮಿಟ್ರೊವ್ ಎಟಿಪಿ ಫೈನಲ್ಸ್ನ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ರವಿವಾರ ನಡೆದ ಫೈನಲ್ ಫೈಟ್ನಲ್ಲಿ ಬಲ್ಗೇರಿಯದ 6ನೇ ಶ್ರೇಯಾಂಕದ ಡಿಮಿಟ್ರೊವ್ ಏಳನೇ ಶ್ರೇಯಾಂಕದ ಗೊಫಿನ್ರನ್ನು 7-5, 4-6, 6-3 ಸೆಟ್ಗಳಿಂದ ಮಣಿಸಿದರು. ಈ ಮೂಲಕ 1998ರ ಬಳಿಕ ತನ್ನ ಚೊಚ್ಚಲ ಪ್ರವೇಶದಲ್ಲೇ ವರ್ಷಾಂತ್ಯದ ಪ್ರತಿಷ್ಠಿತ ಎಟಿಪಿ ಫೈನಲ್ಸ್ ಟೂರ್ನಿಯನ್ನು ಜಯಿಸಿದ ಮೊದಲ ಆಟಗಾರ ಎನಿಸಿಕೊಂಡರು. ಡಿಮಿಟ್ರೊವ್ ವೃತ್ತಿಜೀವನದಲ್ಲಿ ಮೊದಲ ಅತ್ಯಂತ ದೊಡ್ಡ ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಈ ಟೂರ್ನಿಗೆ ಮೊದಲು ಗೊಫಿನ್ ವಿರುದ್ಧ 4-1 ಹೆಡ್-ಟು-ಹೆಡ್ ದಾಖಲೆ ಹೊಂದಿದ್ದರು.
Next Story