ಸಿಂಧು ಕ್ವಾರ್ಟರ್ ಫೈನಲ್ ಗೆ
ಹಾಂಕಾಂಗ್ ಓಪನ್
ಹೊಸದಿಲ್ಲಿ, ನ.23: ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಹಾಂಕಾಂಗ್ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ಗೆ ತಲುಪಿದ್ದಾರೆ.
ಹಾಂಕಾಂಗ್ನಲ್ಲಿ ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ನ ಎರಡನೆ ಸುತ್ತಿನ ಪಂದ್ಯದಲ್ಲಿ ಸಿಂಧು ಜಪಾನ್ನ ಅಯಾ ಒಹೊರಿ ಅವರನ್ನು 21-14, 21-17 ಗೇಮ್ಗಳಿಂದ ಮಣಿಸಿದ್ದಾರೆ. ಸಿಂಧು ಶುಕ್ರವಾರ ನಡೆಯಲಿರುವ ಅಂತಿಮ-8ರ ಪಂದ್ಯದಲ್ಲಿ ಚೀನಾ ಓಪನ್ ವಿಜೇತೆ ಜಪಾನ್ನ ಇನ್ನೋರ್ವ ಆಟಗಾರ್ತಿ ಅಕಾನೆ ಯಮಗುಚಿ ಅವರನ್ನು ಎದುರಿಸಲಿದ್ದಾರೆ.
ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಧು ಹಾಂಕಾಂಗ್ನ ಲೆವುಂಗ್ ಯುಯೆಟ್ ಯೀ ಅವರನ್ನು 21-18, 21-10 ಅಂತರದಿಂದ ಮಣಿಸಿದ್ದರು.
ಪ್ರಣಯ್ಗೆ ಸೋಲು: ಭಾರತದ ಸಿಂಗಲ್ಸ್ ಆಟಗಾರ ಎಚ್.ಎಸ್.ಪ್ರಣಯ್ ಜಪಾನ್ನ ಕಝುಮಸ ಸಕಾಯಿ ವಿರುದ್ಧ ಸೋಲುವ ಮೂಲಕ ಟೂರ್ನಿಯಿಂದ ನಿರ್ಗಮಿಸಿದರು.
ಗುರುವಾರ 54 ನಿಮಿಷಗಳ ಕಾಲ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಪ್ರಣಯ್ ಅವರು ಸಕಾಯಿ ವಿರುದ್ಧ 21-11, 10-21 ಹಾಗೂ 15-21 ಗೇಮ್ಗಳ ಅಂತರದಿಂದ ಸೋತಿದ್ದಾರೆ.
ಪಿ.ಕಶ್ಯಪ್ ಹಾಗೂ ಸೌರಭ್ ವರ್ಮ ಬುಧವಾರ ಮೊದಲ ಸುತ್ತಿನ ಪಂದ್ಯದಲ್ಲೇ ಸೋತು ಕೂಟದಿಂದ ನಿರ್ಗಮಿಸಿದ್ದರು.