ಹಾಂಕಾಂಗ್ ಓಪನ್ ಸೂಪರ್ ಸಿರೀಸ್ : ಸಿಂಧುಗೆ ಬೆಳ್ಳಿ
ಹಾಂಕಾಂಗ್, ನ.26: ಇಲ್ಲಿ ನಡೆಧ ಹಾಂಕಾಂಗ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ವನಿತೆಯರ ಸಿಂಗಲ್ಸ್ ನ ಫೈನಲ್ನಲ್ಲಿ ಭಾರತದ ಪಿ.ವಿ. ಸಿಂಧು ಸೋಲು ಅನುಭವಿಸಿ ಬೆಳ್ಳಿ ಪಡೆದಿದ್ದಾರೆ.
ಸಿಂಧು ಅವರು ಫೈನಲ್ನಲ್ಲಿ ತೈವಾನ್ನ ತೈ ಝು ಯಿಂಗ್ ವಿರುದ್ಧ 18-21, 18-21 ಅಂತರದಲ್ಲಿ ಸೋಲು ಅನುಭವಿಸಿ ಪ್ರಶಸ್ತಿ ಎತ್ತುವ ಅವಕಾಶ ಕಳೆದುಕೊಂಡರು.
ಸತತ ಎರಡನೇ ಬಾರಿ ಸಿಂಧು ಅವರು ತೈ ಝು ಯಿಂಗ್ ವಿರುದ್ಧ ಫೈನಲ್ನಲ್ಲಿ ಸೋತು ಪ್ರಶಸ್ತಿಯನ್ನು ಮುಡಿಗೇರಿಸುವಲ್ಲಿ ಎಡವಿದ್ದಾರೆ.
ಸಿಂಧು ಅವರು ಸೆಮಿಫೈನಲ್ನಲ್ಲಿ ಥಾಯ್ಲ್ಯಾಂಡ್ನ ರಚನಾಕ್ ಇಂತನಾನ್ ವಿರುದ್ಧ 21-17, 21-17 ಅಂತರದಲ್ಲಿ ಜಯ ಗಳಿಸಿ ಫೈನಲ್ ತಲುಪಿದ್ದರು.
Next Story