ಸೂಪರ್ ಸರಣಿ ಫೈನಲ್ಸ್ ಗೆ ಶ್ರೀಕಾಂತ್, ಸಿಂಧು
ಹೊಸದಿಲ್ಲಿ, ನ.30: ದುಬೈನಲ್ಲಿ ವರ್ಷಾಂತ್ಯದಲ್ಲಿ ನಡೆಯಲಿರುವ ಸೂಪರ್ ಸರಣಿ ಬ್ಯಾಡ್ಮಿಂಟನ್ ಫೈನಲ್ಸ್ಗೆ ಭಾರತದ ಇಬ್ಬರು ಶಟ್ಲರ್ಗಳಾದ ಕಿಡಂಬಿ ಶ್ರೀಕಾಂತ್ ಹಾಗೂ ಪಿ.ವಿ.ಸಿಂಧು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಈ ಟೂರ್ನಿಯಲ್ಲಿ ವಿಶ್ವದ ಅಗ್ರ-8 ಬ್ಯಾಡ್ಮಿಂಟನ್ ಸಿಂಗಲ್ಸ್ ಆಟಗಾರರು ಹಾಗೂ ಆಟಗಾರ್ತಿಯರು ಭಾಗವಹಿಸಲಿದ್ದಾರೆ.
ಶ್ರೀಕಾಂತ್ ಈ ವರ್ಷ ನಾಲ್ಕು ಸೂಪರ್ ಸರಣಿಗಳಾದ-ಇಂಡೋನೇಷ್ಯಾ, ಆಸ್ಟ್ರೇಲಿಯ, ಡೆನ್ಮಾರ್ಕ್ ಹಾಗೂ ಫ್ರಾನ್ಸ್ ಪ್ರಶಸ್ತಿ ಜಯಿಸಿದ್ದರು. ಸಿಂಧು ಈ ವರ್ಷ ಕೂಡ ಉತ್ತಮ ಪ್ರದರ್ಶನ ಮುಂದುವರಿಸಿದ್ದು ಎರಡು ಸೂಪರ್ ಸರಣಿ ಪ್ರಶಸ್ತಿಗಳು ಹಾಗೂ ಗ್ರಾನ್ಪ್ರಿ ಟೂರ್ನಿಯನ್ನು ಗೆದ್ದುಕೊಂಡಿದ್ದರು. ವಿಶ್ವ ಚಾಂಪಿಯನ್ಶಿಪ್ನಲ್ಲಿ ಜಪಾನ್ನ ನೊರೊಮಿ ಒಕುಹರಾ ವಿರುದ್ಧ 110 ನಿಮಿಷಗಳ ಫೈನಲ್ ಹಣಾಹಣಿಯಲ್ಲಿ ಸೋತಿದ್ದ ಸಿಂಧು ಬೆಳ್ಳಿ ಜಯಿಸಿದ್ದರು. ಈ ಸಾಧನೆಯ ಮೂಲಕ ಸಿಂಧು ಹಾಗೂ ಶ್ರೀಕಾಂತ್ ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್ನಲ್ಲಿ ದ್ವಿತೀಯ ಸ್ಥಾನಕ್ಕೇರಿದ್ದಾರೆ.
Next Story