‘ಒಲಿಂಪಿಕ್ಸ್ನಲ್ಲಿ 10 ಓವರ್ ಕ್ರಿಕೆಟ್ ಸೇರ್ಪಡೆಯಾಗಲಿ’
ಸೆಹ್ವಾಗ್
ಮುಂಬೈ, ನ.30: ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಸೇರ್ಪಡೆಗೆ ಬೆಂಬಲ ವ್ಯಕ್ತಪಡಿಸಿರುವ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ 50 ಓವರ್ ಅಥವಾ ಟ್ವೆಂಟಿ-20 ಕ್ರಿಕೆಟ್ ಒಲಿಂಪಿಕ್ಸ್ ಗೆ ಸೇರ್ಪಡೆಯಾಗಬೇಕೆಂದು ನಾನು ಹೇಳುತ್ತಿಲ್ಲ. 10 ಓವರ್ಗಳ ಪಂದ್ಯ ಒಲಿಂಪಿಕ್ಸ್ ಗೆ ಸೂಕ್ತವಾಗುತ್ತದೆ. ಟಿ-10 ಮಾದರಿಯ ಕ್ರಿಕೆಟ್ನಲ್ಲಿ ಉಭಯ ತಂಡಗಳು ತಲಾ 10 ಓವರ್ಗಳನ್ನು ಆಡಬಹುದು ಎಂದಿದ್ದಾರೆ. ‘‘ ಒಲಿಂಪಿಕ್ಸ್ ಗೆ ಕ್ರಿಕೆಟ್ಸೇರ್ಪಡೆಯಾಗಬೇಕೆನ್ನುವುದು ಚರ್ಚೆಯ ವಿಷಯವಾಗಿದೆ. ಇದಕ್ಕೆ ಟಿ-10 ಸರಿಯಾದ ಮಾದರಿಯಾಗಿದೆ. ಈ ಪಂದ್ಯ 90 ನಿಮಿಷಗಳಲ್ಲಿ ಮುಗಿಯುತ್ತದೆ. ಫುಟ್ಬಾಲ್ ಪಂದ್ಯದಂತೆಯೇ ಫಲಿತಾಂಶ ಬೇಗನೇ ಸಿಗುತ್ತದೆ. ಒಲಿಂಪಿಕ್ಸ್ ಗೆ ಕ್ರಿಕೆಟ್ ಸೇರ್ಪಡೆಯಾಗುವ ಬಗ್ಗೆ ಐಸಿಸಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಯೊಂದಿಗೆ ಮಾತುಕತೆ ನಡೆಸಬೇಕು’’ ಎಂದು ಸೆಹ್ವಾಗ್ ಆಗ್ರಹಿಸಿದರು.
Next Story