ಭಾರತದ ಮಹಿಳಾ ಕ್ರಿಕೆಟ್ ತಂಡದ ಮಾಜಿ ಕೋಚ್ ಶ್ರೀರೂಪಾ ನಿಧನ
ಕೋಲ್ಕತಾ, ನ.30: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮಾಜಿ ಕೋಚ್ ಹಾಗೂ ಆಟಗಾರ್ತಿ ಶ್ರೀರೂಪಾ ಬೋಸ್(ಮುಖರ್ಜಿ) ಹೃದಯಾಘಾತದಿಂದ ಗುರುವಾರ ಬೆಳಗ್ಗೆ ನಿಧನರಾದರು. 66ರ ಪ್ರಾಯದ ಬೋಸ್ ಸಾಲ್ಟ್ ಲೇಕ್ನಲ್ಲಿರುವ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪತಿ, ಮಕ್ಕಳಾದ ಬಂಗಾಳ ಒಲಿಂಪಿಕ್ಸ್ ಸಂಸ್ಥೆ(ಬಿಒಎ) ಅಧ್ಯಕ್ಷ ಪರೇಶ್ ನಾಥ್ ಮುಖರ್ಜಿ ಹಾಗೂ ಟೆನಿಸ್ ಆಟಗಾರ್ತಿ ಅಮೃತಾ ಮುಖರ್ಜಿ ಅವರನ್ನು ಅಗಲಿದ್ದಾರೆ.
ಶ್ರೀರೂಪಾ ಬೆಳಗ್ಗೆ 10:30ರ ಸುಮಾರಿಗೆ ವಾಶ್ರೂಮ್ನಲ್ಲಿ ಕುಸಿದುಬಿದ್ದರು. ತಕ್ಷಣವೇ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಭಾರತದ ಪರ ಹಲವು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದ ಶ್ರೀರೂಪಾ ಬೋಸ್ 1993, 1997 ಹಾಗೂ 2000ರ ಐಸಿಸಿ ಮಹಿಳಾ ವಿಶ್ವಕಪ್ನಲ್ಲಿ ಭಾರತ ತಂಡಕ್ಕೆ ಕೋಚಿಂಗ್ ನೀಡಿದ್ದರು.
Next Story