2019ರ ವಿಶ್ವಕಪ್ ಗೆದ್ದರೆ ಕೊಹ್ಲಿ ಸಂಭ್ರಮಾಚರಣೆ ಹೀಗಿರಬಹುದು ಎಂದ ಗಂಗೂಲಿ!
ಹೊಸದಿಲ್ಲಿ, ಡಿ.3: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧದ ಮೂರನಡ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.
ಕೊಹ್ಲಿ ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರು ಎಂದಿರುವ ಮಾಜಿ ನಾಯಕ ಸೌರವ್ ಗಂಗೂಲಿ “ಆಸ್ಟ್ರೇಲಿಯಾ ವಿರುದ್ಧ ಪಂದ್ಯ ನಡೆಯುವಾಗಲೆಲ್ಲಾ ಲಕ್ಷ್ಮಣ್ ಹಾಗು ಹರ್ಭಜನ್ ಆಸ್ಟ್ರೇಲಿಯಾ ತಂಡವನ್ನು ಸೋಲಿಸುತ್ತಾರೆ ಎನ್ನುವ ಧೈರ್ಯ ನಮಗಿರುತ್ತಿತ್ತು. ಈಗ ಕೊಹ್ಲಿ ಕೂಡ ಹಾಗೆಯೇ ಅನಿಸುತ್ತಿದ್ದಾರೆ” ಎಂದಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಂಗೂಲಿ, 2019ರಲ್ಲಿ ಭಾರತ ವಿಶ್ವಕಪ್ ಗೆದ್ದರೆ ಕೊಹ್ಲಿ ಶರ್ಟ್ ತೆಗೆದು ಆಕ್ಸ್ ಫರ್ಡ್ ಬೀದಿಗಳಲ್ಲಿ ಓಡಾಡಬಹುದು” ಎಂದು ಜೋಕ್ ಮಾಡಿದ್ದಾರೆ.
“ನಾವು ಕ್ರಿಕೆಟ್ ಆಡುತ್ತಿದ್ದಾಗ ಭಾರತೀಯ ಕ್ರಿಕೆಟ್ ವಿಭಿನ್ನವಾಗಿತ್ತು ಹಾಗು ಆಲೋಚನೆಗಳೂ ವಿಭಿನ್ನವಾಗಿತ್ತು. ಧೋನಿ ನಾಯಕರಾದ ನಂತರ ಭಾರತ ತಂಡವನ್ನು ಅವರು ಯಶಸ್ವಿಯಾಗಿ ಮುನ್ನಡೆಸಿದರು. ವಿರಾಟ್ ನಾಯಕತ್ವದಲ್ಲೂ ಅವರು ಯಶಸ್ವಿಯಾಗಿ ಭಾರತ ತಂಡವನ್ನು ಇನ್ನೂ ಮುಂದಕ್ಕೆ ಕೊಂಡೊಯ್ಯುತ್ತಿದ್ದಾರೆ" ಎಂದು ಗಂಗೂಲಿ ಹೇಳಿದ್ದಾರೆ.