ಬಿಪಿಎಲ್: 45 ಎಸೆತಗಳಲ್ಲಿ ಕ್ರಿಸ್ ಗೇಲ್ ಶತಕ
ಢಾಕಾ, ಡಿ.8: ಬಾಂಗ್ಲಾದೇಶ ಪ್ರೀಮಿಯರ್ ಲೀಗ್(ಬಿಪಿಎಲ್) ಟ್ವೆಂಟಿ-20 ಟೂರ್ನಮೆಂಟ್ನಲ್ಲಿ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ ಕೇವಲ 45 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. ಗೇಲ್ ಟ್ವೆಂಟಿ-20 ಕ್ರಿಕೆಟ್ನಲ್ಲಿ 19ನೇ ಶತಕ ಬಾರಿಸಿದರು. ಖುಲ್ನಾ ಟೈಟಾನ್ಸ್ ಹಾಗೂ ರಂಗ್ಪುರ್ ರೈಡರ್ಸ್ ನಡುವೆ ಶುಕ್ರವಾರ ನಡೆದಿದ್ದ ಎಲಿಮಿನೇಟರ್ ಪಂದ್ಯದಲ್ಲಿ ಗೇಲ್ 14 ಸಿಕ್ಸರ್, 6 ಬೌಂಡರಿಗಳ ಸಹಿತ 126 ರನ್ ಗಳಿಸಿದರು. ಗೇಲ್ ಟ್ವೆಂಟಿ-20 ಕ್ರಿಕೆಟ್ನಲ್ಲಿ 800 ಸಿಕ್ಸರ್ ಸಿಡಿಸಿದ ಮೊದಲಿಗನಾಗಿದ್ದಾರೆ. ಪಂದ್ಯದ 14ನೇ ಓವರ್ನಲ್ಲಿ ಮಿಡ್ವಿಕೆಟ್ ನತ್ತ ಸಿಕ್ಸರ್ ಸಿಡಿಸಿ ಶತಕ ಪೂರೈಸಿದ ಗೇಲ್ 2011ರ ಬಳಿಕ ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ ಶತಕ ಸಿಡಿಸುತ್ತಾ ಬಂದಿದ್ದಾರೆ.
Next Story