ಭಾರತಕ್ಕೆ ಭರ್ಜರಿ ಜಯ
ಮೊಹಾಲಿ, ಡಿ.13: ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ 141 ರನ್ಗಳ ಭರ್ಜರಿ ಜಯ ಗಳಿಸಿದೆ.
ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1-1 ಸಮಬಲ ಸಾಧಿಸಿದೆ.
ಗೆಲುವಿಗೆ 393 ರನ್ಗಳ ಕಠಿಣ ಸವಾಲು ಪಡೆದಿದ್ದ ಶ್ರೀಲಂಕಾ ತಂಡ ನಿಗದಿತ 50 ಓವರ್ಗಳಲ್ಲಿ ಆ್ಯಂಜೆಲೊ ಮ್ಯಾಥ್ಯೂಸ್ ಶತಕ(ಔಟಾಗದೆ 111) ನೆರವಿನಲ್ಲಿ 8 ವಿಕೆಟ್ ನಷ್ಟದಲ್ಲಿ 251ರನ್ ಗಳಿಸಿತ್ತು.
ಇದಕ್ಕೂ ಮೊದಲು ಭಾರತ ಹಂಗಾಮಿ ನಾಯಕ ರೋಹಿತ್ ಶರ್ಮಾ ದ್ವಿಶತಕ (ಔಟಾಗದೆ 208) ನೆರವಿನಲ್ಲಿ ನಿಗದಿತ 50 ಓವರ್ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 392 ರನ್ ಗಳಿಸಿತ್ತು.
ಭಾರತದ ಯುಜುವೇಂದ್ರ ಚಹಾಲ್ 60ಕ್ಕೆ 3 ವಿಕೆಟ್ ಉಡಾಯಿಸಿದರು.
Next Story