ಐಟಿಎಫ್ನ 4 ಹುದ್ದೆಗೆ ಅನಿಲ್ ಖನ್ನಾ ನೇಮಕ
ಹೊಸದಿಲ್ಲಿ, ಡಿ.13: ಏಷ್ಯನ್ ಟೆನಿಸ್ ಫೆಡರೇಶನ್(ಎಟಿಎಫ್) ಅಧ್ಯಕ್ಷ ಅನಿಲ್ ಖನ್ನಾ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ನ(ಐಟಿಎಫ್) 4 ಮುಖ್ಯ ಹುದ್ದೆಗಳಿಗೆ ನೇಮಕಗೊಂಡಿದ್ದಾರೆ. 2003 ರಿಂದ 2011ರ ತನಕ ಐಟಿಎಫ್ನ ನಿರ್ದೇಶಕರ ಮಂಡಳಿಯಲ್ಲಿ ಸೇವೆ ಸಲ್ಲಿಸಿರುವ ಖನ್ನಾ ಇದೀಗ ಮರು ಆಯ್ಕೆಯಾಗಿದ್ದಾರೆ. 4 ಪ್ರಮುಖ ಸಮಿತಿ ಹಾಗೂ ಐಟಿಎಫ್ನ ಕಾರ್ಯಪಡೆಗೆ ಆಯ್ಕೆಯಾಗಿದ್ದಾರೆ. ಖನ್ನಾ ಐಟಿಎಫ್ನ ವಿಶ್ವವ್ಯಾಪಿ ಅಭಿವೃದ್ದಿ ಸಲಹೆಗಾರರ ಗುಂಪಿನ ಅಧ್ಯಕ್ಷರಾಗಿದ್ದಾರೆ.
Next Story