ಜ.27,28ಕ್ಕೆ ಐಪಿಎಲ್ ಹರಾಜು ಪ್ರಕ್ರಿಯೆ
ಹೊಸದಿಲ್ಲಿ, ಡಿ.19: ಹನ್ನೊಂದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ಜ.27 ಹಾಗೂ 28 ರಂದು ನಡೆಯಲಿದೆ.
‘‘ಎಲ್ಲ ಹಿರಿಯ ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ. ಮೆಗಾ ಹರಾಜು ಪ್ರಕ್ರಿಯೆ ಜ.27 ಹಾಗೂ 28 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಬೆಂಗಳೂರು ಈ ಹಿಂದೆ ನಡೆದಿರುವ ಎಲ್ಲ ಹರಾಜು ಕಾರ್ಯಕ್ರಮದ ಆತಿಥ್ಯವನ್ನು ವಹಿಸಿಕೊಂಡಿತ್ತು’’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
ಈ ವರ್ಷದ ಹರಾಜಿನಲ್ಲಿ ಭಾಗವಹಿಸುವ ತಂಡಗಳು ಹರಾಜು ಬಜೆಟ್ನ್ನು 66 ಕೋ.ರೂ.ನಿಂದ 80 ಕೋ.ರೂ.ಗೆಹೆಚ್ಚಿಸಿವೆ.
ಫ್ರಾಂಚೈಸಿಗಳು ಐದು ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
Next Story