ಬಾಕ್ಸಿಂಗ್ ಡೇ ಟೆಸ್ಟ್: ವಾರ್ನರ್ ಶತಕ; ಆಸ್ಟ್ರೇಲಿಯ 244/3
ಮೆಲ್ಬೋರ್ನ್, ಡಿ.26: ಕ್ರಿಸ್ಮಸ್ ಮರುದಿನ ನಡೆಯಲಿರುವ ಸಾಂಪ್ರದಾಯಿಕ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಡೇವಿಡ್ ವಾರ್ನರ್ ಶತಕ ದಾಖಲಿಸಿದ್ದಾರೆ.
ಮಂಗಳವಾರ ಇಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಆ್ಯಶಸ್ ಟೆಸ್ಟ್ನಲ್ಲಿ ವಾರ್ನರ್ 99 ರನ್ ಗಳಿಸಿದ್ದಾಗ ಔಟಾಗಿದ್ದರು. ಆದರೆ, ಅದು ಟಾಮ್ ಕುರ್ರಮ್ ಎಸೆದ ಚೆಂಡು ನೋ ಬಾಲ್ ಆಗಿದ್ದ ಕಾರಣ ಜೀವದಾನ ಪಡೆದ ವಾರ್ನರ್ 21ನೇ ಶತಕ ಪೂರೈಸಿದರು. 103 ರನ್ ಗಳಿಸಿದ ಬಳಿಕ ಆ್ಯಂಡರ್ಸನ್ಗೆ ವಿಕೆಟ್ ಒಪ್ಪಿಸಿದರು.
ವಾರ್ನರ್ ಶತಕದ ಬೆಂಬಲದಿಂದ ಆಸ್ಟ್ರೇಲಿಯ ಮೊದಲ ದಿನದಾಟದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿದೆ. ನಾಯಕ ಸ್ಟೀವನ್ ಸ್ಮಿತ್ (ಅಜೇಯ 65) ಹಾಗೂ ಶಾನ್ ಮಾರ್ಷ್(ಅಜೇಯ 31) ಕ್ರೀಸ್ ಕಾಯ್ದುಕೊಂಡಿದ್ದಾರೆ.
Next Story