ಐಪಿಎಲ್ನಲ್ಲಿ ಆಡಬೇಕೆಂಬ ಬಯಕೆಯಿದೆ: ಮೊಯಿನ್ ಅಲಿ
ಮುಂಬೈ, ಮಾ.9: ‘‘ವಿಶ್ವದ ಶ್ರೀಮಂತ ಟ್ವೆಂಟಿ-20 ಲೀಗ್ ಐಪಿಎಲ್ನಲ್ಲಿ ಆಡಬೇಕೆಂಬ ಆಸೆಯಿದೆ. ಈ ಟೂರ್ನಿಯಲ್ಲಿ ಆಡುವುದರಿಂದ ಭಾರತೀಯ ಸ್ಪಿನ್ನರ್ಗಳ ಬಗ್ಗೆ ಕಲಿಯಬಹುದು’’ ಎಂದು ಇಂಗ್ಲೆಂಡ್ನ ಆಲ್ರೌಂಡರ್ ಮೊಯಿನ್ ಅಲಿ ಬುಧವಾರ ಹೇಳಿದ್ದಾರೆ.
‘‘ ಒಂದಲ್ಲ ಒಂದು ದಿನ ಐಪಿಎಲ್ನಲ್ಲಿ ಆಡಬೇಕೆಂಬ ಆಸೆಯಿದೆ. ಅದೊಂದು ಅತ್ಯಂತ ದೊಡ್ಡ ಟೂರ್ನಿ. ಆ ಟೂರ್ನಿಯಲ್ಲಿ ಆಡಿದರೆ ಅಗ್ರ ಸ್ಪಿನ್ನರ್ ಬೌಲರ್ಗಳು ಹೇಗೆ ಬೌಲಿಂಗ್ ಮಾಡುತ್ತಾರೆ ಎಂದು ಗೊತ್ತಾಗುತ್ತದೆ. ಅವರೊಂದಿಗೆ ಡ್ರೆಸ್ಸಿಂಗ್ ರೂಮ್ನ್ನು ಹಂಚಿಕೊಳ್ಳಬಹುದು’’ ಎಂದು ಟ್ವೆಂಟಿ-20 ವಿಶ್ವಕಪ್ನಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಅಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
27 ದಿನಗಳ ಕಾಲ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ಮಾ.8 ರಂದು ನಾಗ್ಪುರದಲ್ಲಿ ಆರಂಭವಾಗಿದ್ದು, ಭಾರತದ 8 ಸ್ಟೇಡಿಯಂಗಳಲ್ಲಿ ನಡೆಯಲಿದೆ.
ಎ.3 ರಂದು ಕೋಲ್ಕತಾದ ಈಡನ್ಗಾರ್ಡನ್ನಲ್ಲಿ ಫೈನಲ್ ಪಂದ್ಯ ನಡೆಯುವುದು. ಇಂಗ್ಲೆಂಡ್ ತಂಡ ಗ್ರೂಪ್-1ರಲ್ಲಿ ದಕ್ಷಿಣ ಆಫ್ರಿಕ, ಇಂಗ್ಲೆಂಡ್, ವೆಸ್ಟ್ಇಂಡೀಸ್ ಹಾಗೂ ಶ್ರೀಲಂಕಾ ತಂಡಗಳೊಂದಿಗೆ ಸ್ಥಾನ ಪಡೆದಿದೆ.