ಅಸ್ವಸ್ಥಗೊಂಡು ಕುಸಿದುಬಿದ್ದ ಫುಟ್ಬಾಲ್ ದಂತಕಥೆ ಪೀಲೆ
ಆಸ್ಪತ್ರೆಗೆ ದಾಖಲು
ಬ್ರೆಝಿಲ್, ಜ.19: ಫುಟ್ಬಾಲ್ ದಂತಕಥೆ ಪೀಲೆ ತೀವ್ರ ಅಸ್ವಸ್ಥಗೊಂಡು ಕುಸಿದುಬಿದ್ದಿದ್ದು, ಅವರನ್ನು ಬ್ರೆಝಿಲ್ ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ವಾರ ಪೀಲೆ ಲಂಡನ್ ಗೆ ತೆರಳುವವರಿದ್ದರು. ಆದರೆ ಅವರು ಕುಸಿದುಬಿದ್ದ ಕಾರಣ ಎಲ್ಲಾ ಪ್ರವಾಸಗಳನ್ನು ರದ್ದುಪಡಿಸಲಾಗಿದೆ.
“ಗುರುವಾರ ಬೆಳಗ್ಗೆ ಕುಸಿದು ಬಿದ್ದ ಪೀಲೆಯನ್ನು ಬ್ರೆಝಿಲ್ ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಹಲವು ಪರೀಕ್ಷೆಗಳನ್ನು ನಡೆಸಿದ್ದಾರೆ. ಬಳಲಿಕೆಯಿಂದ ಅವರು ಕುಸಿದು ಬಿದ್ದಿರುವುದು ತಿಳಿದುಬಂದಿದೆ” ಎಂದು ಫುಟ್ಬಾಲ್ ರೈಟರ್ಸ್ ಅಸೋಸಿಯೇಶನ್ ಹೇಳಿದೆ.
Next Story