ಫೆಡರರ್, ಬೆರ್ಡಿಕ್ ಕ್ವಾರ್ಟರ್ ಪೈನಲ್ ಗೆ ಲಗ್ಗೆ
ಆಸ್ಟ್ರೇಲಿಯನ್ ಓಪನ್
ಮೆಲ್ಬೋರ್ನ್, ಜ.22: ಸ್ವಿಸ್ ಸೂಪರ್ಸ್ಟಾರ್ ರೋಜರ್ ಫೆಡರರ್ ಆಸ್ಟ್ರೇಲಿಯನ್ ಓಪನ್ನಲ್ಲಿ 14ನೇ ಬಾರಿ ಕ್ವಾರ್ಟರ್ ಫೈನಲ್ಗೆ ತಲುಪಿದ್ದಾರೆ.
ಹಾಲಿ ಚಾಂಪಿಯನ್ ಫೆಡರರ್ ಸೋಮವಾರ ನಡೆದ ಪುರುಷರ ಸಿಂಗಲ್ಸ್ನ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಹಂಗೇರಿಯದ ಮಾರ್ಟನ್ ಫುಸೋವಿಕ್ಸ್ರನ್ನು 6-4,7-6(3), 6-2 ಸೆಟ್ಗಳಿಂದ ಮಣಿಸಿದ್ದಾರೆ. ಅವರು ಕ್ವಾರ್ಟರ್ ಫೈನಲ್ನಲ್ಲಿ ಝೆಕ್ನ ಥಾಮಸ್ ಬೆರ್ಡಿಕ್ರನ್ನು ಎದುರಿಸಲು ಸಜ್ಜಾಗಿದ್ದಾರೆ.
ಇಟಲಿಯ ಫ್ಯಾಬಿಯೊ ಫೋಗ್ನಿನಿ ಅವರನ್ನು 6-1, 6-4, 6-4 ಸೆಟ್ಗಳಿಂದ ಮಣಿಸಿದ ಬೆರ್ಡಿಕ್ ಏಳನೇ ಬಾರಿ ಕ್ವಾರ್ಟರ್ ಫೈನಲ್ಗೆ ತಲುಪಿದ್ದಾರೆ.
ಫೆಡರರ್ 1977ರ ಬಳಿಕ ಆಸ್ಟ್ರೇಲಿಯನ್ ಓಪನ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. 1977ರಲ್ಲಿ ಕೆನ್ ರೋಸ್ವಾಲ್ ಈ ಸಾಧನೆ ಮಾಡಿದ್ದರು.
►ಕೆರ್ಬರ್,ಹಾಲೆಪ್ ಕ್ವಾರ್ಟರ್ ಫೈನಲ್ಗೆ:
ಆಸ್ಟ್ರೇಲಿಯನ್ ಓಪನ್ನ ಮಹಿಳೆಯರ ಸಿಂಗಲ್ಸ್ ನಲ್ಲಿ ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್ ಹಾಗೂ ರೊಮಾನಿಯದ ಸಿಮೊನಾ ಹಾಲೆಪ್ ಕ್ವಾರ್ಟರ್ ಫೈನಲ್ಗೆ ತಲುಪಿದ್ದಾರೆ.
ಸೋಮವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಕೆರ್ಬರ್ ತೈವಾನ್ನ ಸೀ ಸು-ವೀ ವಿರುದ್ಧ 4-6, 7-5, 6-2 ಸೆಟ್ಗಳಿಂದ ಜಯ ಸಾಧಿಸಿದ್ದಾರೆ.
ಮಾಜಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಕೆರ್ಬರ್ ಮುಂದಿನ ಸುತ್ತಿನಲ್ಲಿ ಅಮೆರಿಕದ ಮ್ಯಾಡಿಸನ್ ಕೀಸ್ರನ್ನು ಎದುರಿಸಲಿದ್ದಾರೆ.