ಎ.7 ರಿಂದ 11ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭ
ಹೊಸದಿಲ್ಲಿ, ಜ.22: ಹನ್ನೊಂದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಎ.7 ರಿಂದ ಮೇ 27ರ ತನಕ ನಡೆಯಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಸೋಮವಾರ ತಿಳಿಸಿದೆ.
ಶ್ರೀಮಂತ ಟ್ವೆಂಟಿ-20 ಟೂರ್ನಿಯ ಉದ್ಘಾಟನಾ ಹಾಗೂ ಫೈನಲ್ ಪಂದ್ಯದ ಆತಿಥ್ಯವನ್ನು ಮುಂಬೈ ವಹಿಸಿಕೊಳ್ಳಲಿದೆ.
ಈ ಹಿಂದೆ ಸಂಜೆ 4 ಹಾಗೂ ರಾತ್ರಿ 8 ಗಂಟೆಗೆ ಆರಂಭವಾಗುತ್ತಿದ್ದ ಪಂದ್ಯದ ವೇಳಾಪಟ್ಟಿಯನ್ನು ಬದಲಿಸಲು ಐಪಿಎಲ್ ಆಡಳಿತ ಮಂಡಳಿ ನಿರ್ಧರಿಸಿದೆ.
‘‘ಪಂದ್ಯ ಪ್ರಸಾರ ಸಂಸ್ಥೆ ಸಮಯ ಬದಲಿಸಲು ಕೋರಿದೆೆ. ಐಪಿಎಲ್ ಆಡಳಿತ ಮಂಡಳಿ ಅದರ ಕೋರಿಕೆಯನ್ನು ಸ್ವೀಕರಿಸಲಿದೆ. ರಾತ್ರಿ 8ಕ್ಕೆ ನೇರ ಪ್ರಸಾರವಾಗುವ ಪಂದ್ಯ ಸಂಜೆ 7 ಗಂಟೆಗೆ ಹಾಗೂ ಸಂಜೆ 4 ಗಂಟೆಯ ಪಂದ್ಯ ಸಂಜೆ 5:30ಕ್ಕೆ ಆರಂಭವಾಗಲಿದೆ ಎಂದು ಐಪಿಎಲ್ ಆಯುಕ್ತ ರಾಜೀವ್ ಶುಕ್ಲಾ ಹೇಳಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ತನ್ನ ನಾಲ್ಕು ತವರು ಪಂದ್ಯಗಳನ್ನು ಮೊಹಾಲಿ ಹಾಗೂ 3 ಪಂದ್ಯಗಳನ್ನು ಇಂದೋರ್ನಲ್ಲಿ ಆಡಲಿದೆ. ಎರಡು ವರ್ಷಗಳ ನಿಷೇಧದಿಂದ ಐಪಿಎಲ್ಗೆ ವಾಪಸಾಗಿರುವ ರಾಜಸ್ಥಾನ ರಾಯಲ್ಸ್ ತಂಡದ ತವರು ಪಂದ್ಯಗಳ ಸ್ಥಳವನ್ನು ರಾಜಸ್ಥಾನ ಹೈಕೋರ್ಟ್ ವಿಚಾರಣೆ ಬಳಿಕ ನಿರ್ಧರಿಸಲಾಗುವುದು. ಕೋರ್ಟ್ ವಿಚಾರಣೆ ಜ.24ಕ್ಕೆ ನಿಗದಿಯಾಗಿದೆ.