ಬೋಪಣ್ಣ-ಬಾಬೊಸ್ ಸೆಮಿಗೆ
ಮೆಲ್ಬೋರ್ನ್, ಜ.24: ಭಾರತದ ರೋಹನ್ ಬೋಪಣ್ಣ ಹಾಗೂ ಹಂಗೇರಿಯ ಆಟಗಾರ್ತಿ ಟೈಮಿಯಾ ಬಾಬೊಸ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ನಲ್ಲಿ ಸೆಮಿ ಫೈನಲ್ಗೆ ತಲುಪಿದ್ದಾರೆ.
ಬುಧವಾರ 1 ಗಂಟೆ, 15 ನಿಮಿಷಗಳ ಕಾಲ ನಡೆದ ಕ್ವಾರ್ಟರ್ ಫೈನಲ್ನಲ್ಲಿ 5ನೇ ಶ್ರೇಯಾಂಕದ ಬೋಪಣ್ಣ-ಬಾಬೊಸ್ ಜೋಡಿ ಕೊಲಂಬಿಯಾದ ಜುಯಾನ್ ಸೆಬಾಸ್ಟಿಯನ್ ಹಾಗೂ ಅಮೆರಿಕದ ಅಬಿಗೈಲ್ ಸ್ಪಿಯರ್ಸ್ರನ್ನು 6-4, 7-6(5) ಸೆಟ್ಗಳಿಂದ ಮಣಿಸಿತು.
Next Story