ಫೆಡರರ್ಗೆ 20ನೇ ಗ್ರ್ಯಾನ್ ಸ್ಲಾಮ್ ಕಿರೀಟ
6ನೇ ಬಾರಿ ಆಸ್ಟ್ರೇಲಿಯನ್ ಓಪನ್ ಜಯಿಸಿದ ಸ್ವಿಸ್ ಆಟಗಾರ
ಮೆಲ್ಬೋರ್ನ್, ಜ.28: ಸ್ವಿಸ್ ಆಟಗಾರ ರೋಜರ್ ಫೆಡರರ್ ರವಿವಾರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ನ ಫೈನಲ್ ನಲ್ಲಿ ಕ್ರೊಯೇಶಿಯಾದ ಮರಿನ್ ಸಿಲಿಕ್ ಅವರನ್ನು ಮಣಿಸುವ ಮೂಲಕ 20ನೇ ಗ್ರ್ಯಾನ್ ಸ್ಲಾಮ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಫೈನಲ್ನಲ್ಲಿ ಫೆಡರರ್ ಅವರು ಸಿಲಿಕ್ ಅವರನ್ನು 6-2, 6-7(5), 6-3, 3-6, 6-1 ಅಂತರದಲ್ಲಿ ಮಣಿಸಿ ಆರನೇ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.
36ರ ಹರೆಯದ ಹಾಲಿ ಚಾಂಪಿಯನ್ ಫೆಡರರ್ ಅವರನ್ನು ಸೋಲಿಸಿ ಮೊದಲ ಬಾರಿ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಮ್ ಜಯಿಸುವ ಸಿಲಿಕ್ ಅವರ ಪ್ರಯತ್ನ ಫಲ ನೀಡಲಿಲ್ಲ.
Next Story