ಮೇರಿ ಕೋಮ್, ಸರಿತಾ, ಪಿಂಕಿ ಫೈನಲ್ಗೆ
ಇಂಡಿಯಾ ಓಪನ್ ಬಾಕ್ಸಿಂಗ್
ಹೊಸದಿಲ್ಲಿ, ಜ.31: ಇಲ್ಲಿ ನಡೆಯುತ್ತಿರುವ ಇಂಡಿಯಾ ಓಪನ್ ಬಾಕ್ಸಿಂಗ್ ಟೂರ್ನಿಯಲ್ಲಿ ಐದು ಬಾರಿ ವಿಶ್ವ ಚಾಂಪಿಯನ್ ಪ್ರಶಸ್ತಿ ಜಯಿಸಿರುವ ಮೇರಿ ಕೋಮ್, ಸರಿತಾ ದೇವಿ ಮತ್ತು ಪಿಂಕಿ ರಾಣಿ ಅವರು ಫೈನಲ್ ತಲುಪಿದ್ದಾರೆ. ಇದೇ ವೇಳೆ ಶಿವ ಥಾಫ ಮತ್ತು ಮನೋಜ್ ಕುಮಾರ್ ಅವರು ಸೆಮಿಫೈನಲ್ನಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತರಾಗಿದ್ದಾರೆ. 48 ಕೆ.ಜಿ ವಿಭಾಗದಲ್ಲಿ ಮಣಿಪುರದ ಮೇರಿಕೋಮ್ ಅವರು ಮುಂಗೋಲಿಯಾದ ಅಲ್ಟಾನ್ಸೆಟ್ಸೆಗ್ ಲುಟ್ಸೈಖಾನ್ ಅವರನ್ನು 4-1 ಅಂತರದಲ್ಲಿ ಸೋಲಿಸಿ ಫೈನಲ್ ತಲುಪಿದರು. ಸರಿತಾ ದೇವಿ ಅವರು ಭಾರತದ ಪ್ರಿಯಾಂಕಾ ಚೌಧರಿಯನ್ನು 4-1 ಅಂತರದಲ್ಲಿ ಮಣಿಸಿದರು ಮತ್ತು ಪಿಂಕಿ ರಾಣಿ ಅವರು ಥಾಯ್ಲೆಂಡ್ನ ಚೂಥಾಮತ್ ರಾಕ್ಸಟ್ ವಿರುದ್ಧ 5-0 ಅಂತರದಲ್ಲಿ ಜಯ ಗಳಿಸಿ ಫೈನಲ್ ತಲುಪಿದರು.
Next Story