ಪೆಟ್ರಾ ಕ್ವಿಟೋವಾ ಶುಭಾರಂಭ, ಗಾರ್ಸಿಯಾಗೆ ಸೋಲು
ಸೈಂಟ್ ಪೀಟರ್ಸ್ಬರ್ಗ್ ಲೇಡಿಸ್ ಟ್ರೋಫಿ
ಸೈಂಟ್ ಪೀಟರ್ಸ್ಬರ್ಗ್, ಫೆ.1: ಸೈಂಟ್ ಪೀಟರ್ಸ್ಬರ್ಗ್ ಲೇಡಿಸ್ ಟ್ರೋಫಿಯಲ್ಲಿ ಪೆಟ್ರಾ ಕ್ವಿಟೋವಾ ಎರಡನೇ ಸುತ್ತಿಗೆ ತೇರ್ಗಡೆಯಾಗಿದ್ದಾರೆ. ಕರೊಲಿನ್ ಗಾರ್ಸಿಯಾ ಕೂಟದಿಂದ ನಿರ್ಗಮಿಸಿದ್ದಾರೆ.
ವೈಲ್ಡ್ಕಾರ್ಡ್ ಮೂಲಕ ಟೂರ್ನಿಯಲ್ಲಿ ಆಡಿರುವ ಕ್ವಿಟೋವಾ ಮಹಿಳೆಯರ ಸಿಂಗಲ್ಸ್ನ ಮೊದಲ ಸುತ್ತಿನ ಪಂದ್ಯದಲ್ಲಿ ಎಲೆನಾ ವೆಸ್ನಿನಾರನ್ನು 6-2, 6-0 ಅಂತರದಿಂದ ಮಣಿಸಿದ್ದಾರೆ. ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಕ್ವಿಟೋವಾ ಮುಂದಿನ ಸುತ್ತಿನಲ್ಲಿ ಇರಿನಾ-ಕ್ಯಾಮೆಲಿಯಾ ಬೆಗು ಅವರನ್ನು ಎದುರಿಸಲಿದ್ದಾರೆ.
ವಿಶ್ವದ ನಂ.7ನೇ ಆಟಗಾರ್ತಿ ಗಾರ್ಸಿಯಾ ರಶ್ಯದ ಕ್ವಾಲಿಫೈಯರ್ ಎಲೆನಾ ರಿಬಾಕಿನಾ ವಿರುದ್ಧ 4-6, 7-6(6), 7-6(5) ಸೆಟ್ಗಳಿಂದ ಸೋತಿದ್ದಾರೆ. ರಿಬಾಕಿನಾ ಮುಂದಿನ ಸುತ್ತಿನಲ್ಲಿ ಜುಲಿಯಾ ಜಾರ್ಜಸ್ ಅಥವಾ ರೊಬರ್ಟ ವಿನ್ಸಿ ಅವರನ್ನು ಎದುರಿಸಲಿದ್ದಾರೆ.
ಕಳೆದ ವರ್ಷ ಫ್ರೆಂಚ್ ಓಪನ್ ಚಾಂಪಿಯನ್ ಆಗಿರುವ ಜೆಲೆನಾ ಒಸ್ಟಾಪೆಂಕೊ ರಶ್ಯದ ಹಿರಿಯ ಆಟಗಾರ್ತಿ ವೆರಾ ರ್ವೊನರೆವಾರನ್ನು 7-6(6), 6-3 ನೇರ ಸೆಟ್ಗಳಿಂದ ಮಣಿಸಿ ಕ್ವಾರ್ಟರ್ ಫೈನಲ್ಗೆ ತಲುಪಿದ್ದಾರೆ. ಕ್ವಾರ್ಟರ್ ಫೈನಲ್ನಲ್ಲಿ ಕ್ವಿಟೋವಾ ಅಥವಾ ಬೆಗುರನ್ನು ಎದುರಿಸಲಿದ್ದಾರೆ.