ತಮಿಳುನಾಡು ವಿರುದ್ಧ ಗೋವಾಕ್ಕೆ ಜಯ
ವಿಜಯ್ ಹಝಾರೆ ಟ್ರೋಫಿ
ಚೆನ್ನೈ, ಫೆ.6: ವಿಜಯ್ ಹಝಾರೆ ಟ್ರೋಫಿ ಏಕದಿನ ಟೂರ್ನಮೆಂಟ್ನ ‘ಸಿ’ ಗುಂಪಿನ ಪಂದ್ಯದಲ್ಲಿ ತಮಿಳುನಾಡು ತಂಡ ಗೋವಾ ತಂಡದ ವಿರುದ್ಧ 4 ವಿಕೆಟ್ಗಳಿಂದ ಸೋಲನುಭವಿಸಿದೆ.
ಇಲ್ಲಿನ ಚಿದಂಬರಂ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಗೆಲ್ಲಲು 211 ರನ್ ಗುರಿ ಪಡೆದ ಗೋವಾ ತಂಡ 46.2 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಜಯಭೇರಿ ಬಾರಿಸಿತು. ಸ್ವಪ್ನಿಲ್ ಅಸ್ನೋಡ್ಕರ್(103, 112 ಎಸೆತ, 9 ಬೌಂಡರಿ, 2 ಸಿಕ್ಸರ್) ಏಕಾಂಗಿ ಹೋರಾಟ ನೀಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು ತಂಡ ಮುರಳಿ ವಿಜಯ್(51), ಬಾಬಾ ಅಪರಾಜಿತ್(52) ಅರ್ಧಶತಕದ ಕೊಡುಗೆಯ ಹೊರತಾಗಿಯೂ 48.5 ಓವರ್ಗಳಲ್ಲಿ 210 ರನ್ಗೆ ಆಲೌಟಾಯಿತು.
ಕೌಶಿಕ್ ಗಾಂಧಿ(43) ಹಾಗೂ ವಿಜಯ್ ಮೊದಲ ವಿಕೆಟ್ಗೆ 89 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ನೀಡಿದರು. ಆದರೆ, ದರ್ಶನ್ ಮಿಸಲ್(3-42) ಹಾಗೂ ಶ್ರೀನಿವಾಸ್(3-51) ತಲಾ 3 ವಿಕೆಟ್ಗಳನ್ನು ಕಬಳಿಸಿ ತಮಿಳುನಾಡಿಗೆ ಕಡಿವಾಣ ಹಾಕಿದರು.
Next Story