ಅರ್ಜೆಂಟೀನ ಓಪನ್: ಡೊಮಿನಿಕ್ ಫೈನಲ್ ಗೆ
ಬ್ಯುನಸ್ ಐರಿಸ್, ಫೆ.18: ಅಗ್ರ ಶ್ರೇಯಾಂಕದ ಡೊಮಿನಿಕ್ ಥೀಮ್ ಫ್ರಾನ್ಸ್ನ ಗಯೆಲ್ ಮಾನ್ಫಿಲ್ಸ್ರನ್ನು ನೇರ ಸೆಟ್ಗಳಿಂದ ಸೋಲಿಸುವ ಮೂಲಕ ಅರ್ಜೆಂಟೀನ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.
ಶನಿವಾರ ನಡೆದ ಪುರುಷರ ಸಿಂಗಲ್ಸ್ನ ಸೆಮಿ ಫೈನಲ್ನಲ್ಲಿ ಆಸ್ಟ್ರೀಯದ ಡೊಮಿನಿಕ್ ಅವರು ಮೊನ್ಫಿಲ್ಸ್ ರನ್ನು 6-2, 6-1 ಸೆಟ್ಗಳಿಂದ ಮಣಿಸಿದರು.
ಆರನೇ ಶ್ರೇಯಾಂಕದ ಡೊಮಿನಿಕ್ ಫೈನಲ್ನಲ್ಲಿ ಸ್ಲೋವಾನಿಯದ ಅಲಿಜಾಝ್ ಬೆಡೆನೆ ಅವರನ್ನು ಎದುರಿಸಲಿದ್ದಾರೆ. ಬೆಡೆನೆ ಮತ್ತೊಂದು ಸೆಮಿ ಫೈನಲ್ ಪಂದ್ಯದಲ್ಲಿ ಲೋಕಲ್ ಫೇವರಿಟ್ ಫೆಡೆರಿಕೊ ಡೆಲ್ಬೊನಿಸ್ರನ್ನು 6-4, 2-6, 6-1 ಸೆಟ್ಗಳಿಂದ ಸೋಲಿಸಿದ್ದಾರೆ.
Next Story