ಅರ್ಜೆಂಟೀನ ಓಪನ್: ಡೊಮಿನಿಕ್ ಚಾಂಪಿಯನ್
ಬ್ಯುನಸ್ ಐರಿಸ್,ಫೆ.19: ಅಗ್ರ ಶ್ರೇಯಾಂಕದ ಡೊಮಿನಿಕ್ ಥೀಮ್ ಅರ್ಜೆಂಟೀನ ಓಪನ್ ಟೆನಿಸ್ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ನಲ್ಲಿಚಾಂಪಿಯನ್ಪಟ್ಟಕ್ಕೇರಿದ್ದಾರೆ.
ಸೋಮವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ 24ರ ಹರೆಯದ ಡೊಮಿನಿಕ್ ಸ್ಲೋವಾನಿಯದ ಅಲಿಜಾಝ್ ಬೆಡೆನ್ರನ್ನು 6-2, 6-4 ಸೆಟ್ಗಳಿಂದ ಮಣಿಸಿದರು. ಮೂರು ಋತುವಿನಲ್ಲಿ ಎರಡನೇ ಬಾರಿ ಅರ್ಜೆಂಟೀನ ಓಪನ್ ಪ್ರಶಸ್ತಿಯನ್ನು ಜಯಿಸಿದರು.
ವಿಶ್ವದ ನಂ.6ನೇ ಆಟಗಾರ ಡೊಮಿನಿಕ್ 9ನೇ ಪ್ರಶಸ್ತಿ ಜಯಿಸಿದ್ದು, 2017ರ ಫೆಬ್ರವರಿಯಲ್ಲಿ ರಿಯೋ ಡಿ ಜನೈರೊದಲ್ಲಿ ಕೊನೆಯ ಬಾರಿ ಪ್ರಶಸ್ತಿ ಜಯಿಸಿದ್ದಾರೆ.
Next Story