ಡೆಲ್ ಪೊಟ್ರೊಗೆ ಇಂಡಿಯನ್ ವೆಲ್ಸ್ ಪ್ರಶಸ್ತಿಯ ಗರಿ
ಫೆಡರರ್ಗೆ ಸೋಲು
ಇಂಡಿಯನ್ ವೆಲ್ಸ್, ಮಾ.19: ಮಾಜಿ ಯುಎಸ್ ಚಾಂಪಿಯನ್ ಅರ್ಜೆಂಟೀನದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಅವರು ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ನ ಫೈನಲ್ನಲ್ಲಿ ಅಗ್ರ ಶ್ರೇಯಾಂಕದ ರೋಜರ್ ಫೆಡರರ್ ಅವರಿಗೆ ಸೋಲುಣಿಸುವ ಮೂಲಕ ಮೊದಲ ಬಾರಿ ಪ್ರಶಸ್ತಿ ಎತ್ತಿದ್ದಾರೆ. ಡೆಲ್ ಪೊಟ್ರೊ ಅವರು ಫೆಡರರ್ ವಿರುದ್ಧ 6-4, 6-7(8/10), 7-6(7/2) ಅಂತರದಿಂದ ಜಯ ಗಳಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
Next Story