ಮಿಯಾಮಿ ಮಾಸ್ಟರ್ಸ್: ಯೂಕಿ ಅರ್ಹತಾ ಸುತ್ತಿನಲ್ಲಿ ತೇರ್ಗಡೆ
ಮಿಯಾಮಿ, ಮಾ.20: ಭಾರತದ ಯೂಕಿ ಭಾಂಬ್ರಿ ಎಟಿಪಿ ಮಿಯಾಮಿ ಮಾಸ್ಟರ್ಸ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಜಯಿಸುವ ಮೂಲಕ ಫೈನಲ್ ರೌಂಡ್ ತಲುಪಿದ್ದಾರೆ.
ಇದೇ ವೇಳೆ ಭಾರತದ ರಾಮ್ ಕುಮಾರ್ ರಾಮನಾಥನ್ ಅವರು ಪ್ರಥಮ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದಾರೆ.
ಯೂಕಿ ಅವರು ವಿಶ್ವದ ನಂ.12 ಅರ್ಜೆಂಟೀನದ ರೆಂರೊ ಒಲಿವೊ ವಿರುದ್ಧ 6-4, 6-1 ಅಂತರದಲ್ಲಿ ಜಯಿಸಿ ಪ್ರಮುಖ ಸುತ್ತು ಪ್ರವೇಶಿಸಿದ್ದಾರೆ.
ಮುಂದಿನ ಪಂದ್ಯದಲ್ಲಿ ಯೂಕಿ ಅವರು ಸ್ವೀಡನ್ನ ಎಲಿಯಾಸ್ ವೈಮರ್ ಅವರನ್ನು ಎದುರಿಸುವರು. ರಾಮ್ ಕುಮಾರ್ ಅವರು ಅಮೆರಿಕದ ಮೈಕಲ್ ಮೋಹ್ ವಿರುದ್ಧ 6-7(4),4-6 ಅಂತರದಲ್ಲಿ ಸೋಲುಂಡರು.
Next Story