ಸಿಲಿಕ್, ಡೆಲ್ ಪೊಟ್ರೊ ನಾಲ್ಕನೇ ಸುತ್ತಿಗೆ ತೇರ್ಗಡೆ
ಮಿಯಾಮಿ ಓಪನ್
ಮಿಯಾಮಿ, ಮಾ.26: ಕ್ರೊಯೇಷಿಯದ ಎರಡನೇ ಶ್ರೇಯಾಂಕದ ಮರಿನ್ ಸಿಲಿಕ್ ಹಾಗೂ ಅರ್ಜೆಂಟೀನದ ಮಾರ್ಟಿನ್ ಡೆಲ್ ಪೊಟ್ರೊ ಮಿಯಾಮಿ ಓಪನ್ ಟೆನಿಸ್ ಟೂರ್ನಿಯಲ್ಲಿ ನಾಲ್ಕನೇ ಸುತ್ತಿಗೆ ತೇರ್ಗಡೆಯಾಗಿದ್ದಾರೆ.
ಸಿಲಿಕ್ ರವಿವಾರ ಸುಮಾರು 2 ಗಂಟೆ ಕಾಲ ನಡೆದ ಪುರುಷರ ಸಿಂಗಲ್ಸ್ನ ಮೂರನೇ ಸುತ್ತಿನ ಪಂದ್ಯದಲ್ಲಿ ಕೆನಡಾದ ವಾಸೆಕ್ ಪೊಸ್ಪಿಸಿಲ್ರನ್ನು 7-5, 7-6(4) ಸೆಟ್ಗಳಿಂದ ಮಣಿಸಿದ್ದಾರೆ.
ವಿಶ್ವದ ನಂ.1 ಆಟಗಾರ ರೋಜರ್ ಫೆಡರರ್ ಈಗಾಗಲೇ ಟೂರ್ನಿಯಿಂದ ನಿರ್ಗಮಿಸಿದ್ದು, ಇನ್ನೋರ್ವ ಅಗ್ರ ರ್ಯಾಂಕಿನ ಆಟಗಾರ ಬೆಲ್ಜಿಯಂನ ಗ್ರಿಗೊರ್ ಡಿಮಿಟ್ರೊವ್ ಫ್ರಾನ್ಸ್ನ ಜೆರೆಮಿ ಚಾರ್ಡಿ ವಿರುದ್ಧ 4-6,4-6 ನೇರ ಸೆಟ್ಗಳಿಂದ ಸೋತಿದ್ದಾರೆ.
ಇಂಡಿಯನ್ ವೆಲ್ಸ್ ಚಾಂಪಿಯನ್ ಡೆಲ್ ಪೊಟ್ರೊ ಜಪಾನ್ನ ಕೀ ನಿಶಿಕೊರಿ ಅವರನ್ನು 6-2, 6-2 ನೇರ ಸೆಟ್ಗಳಿಂದ ಸೋಲಿಸುವುದರೊಂದಿಗೆ ಸತತ 13ನೇ ಗೆಲುವು ದಾಖಲಿಸಿದ್ದಾರೆ.
ಐದನೇ ಶ್ರೇಯಾಂಕದ ಡೆಲ್ ಪೊಟ್ರೊ ಮುಂದಿನ ಸುತ್ತಿನಲ್ಲಿ ಸರ್ಬಿಯದ ಫಿಲಿಪ್ ಕ್ರಾಜಿನೊವಿಕ್ರನ್ನು ಎದುರಿಸಲಿದ್ದಾರೆ. ಕ್ರಾಜಿನೊವಿಕ್ ಫ್ರಾನ್ಸ್ನ ಬೆನೊಟ್ ಪೈರ್ ಅವರನ್ನು 6-3, 6-3 ನೇರ ಸೆಟ್ಗಳಿಂದ ಮಣಿಸಿದ್ದಾರೆ.