ಇಂಗ್ಲೆಂಡ್ ಮಹಿಳಾ ತಂಡಕ್ಕೆ ಹೀನಾಯ ಸೋಲು
ತ್ರಿಕೋನ ಟ್ವೆಂಟಿ-20 ಸರಣಿ
ಮುಂಬೈ,ಮಾ.28: ತ್ರಿಕೋನ ಟ್ವೆಂಟಿ-20 ಪಂದ್ಯದಲ್ಲಿ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡ ಆಸ್ಟ್ರೇಲಿಯ ವಿರುದ್ಧ 8 ವಿಕೆಟ್ಗಳಿಂದ ಹೀನಾಯವಾಗಿ ಸೋತಿದೆ. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮಹಿಳಾ ತಂಡ 17.4 ಓವರ್ಗಳಲ್ಲಿ ಕೇವಲ 96 ರನ್ಗೆ ಆಲೌಟಾಯಿತು. ಡೇವಿಡ್ಸನ್-ರಿಚರ್ಡ್ಸ್(24) ಹಾಗೂ ಬೀವೌಂಟ್(17) ಎರಡಂಕೆಯ ಸ್ಕೋರ್ ದಾಖಲಿಸಿದರು. ಆಸ್ಟ್ರೇಲಿಯದ ಪರ ಕಿಮ್ಮ್ಮಿನ್ಸ್(3-20) ಯಶಸ್ವಿ ಬೌಲರ್ ಎನಿಸಿಕೊಂಡರು.
ಗೆಲ್ಲಲು ಸುಲಭ ಗುರಿ ಪಡೆದಿದ್ದ ಆಸ್ಟ್ರೇಲಿಯ ಮಹಿಳಾ ತಂಡ 11.3 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿತು. 3ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 85 ರನ್ ಜೊತೆಯಾಟ ನಡೆಸಿದ ಎಲ್ಲಿಸ್ ಪೆರ್ರಿ(ಔಟಾಗದೆ 47) ಹಾಗೂ ಮೆಗ್ ಲಾನ್ನಿಂಗ್(ಔಟಾಗದೆ 41) ಇನ್ನೂ 51 ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದರು.
ಇಂಗ್ಲೆಂಡ್ ತಂಡ ಶನಿವಾರ ನಡೆಯಲಿರುವ ಫೈನಲ್ನಲ್ಲಿ ಆಸ್ಟ್ರೇಲಿಯವನ್ನು ಎದುರಿಸಲಿದೆ. ಇದಕ್ಕೆ ಮೊದಲು ಗುರುವಾರ ನಡೆಯಲಿರುವ ಕೊನೆಯ ಲೀಗ್ ಪಂದ್ಯದಲ್ಲಿ ಭಾರತವನ್ನು ಎದುರಿಸಲಿದೆ. ಮೊದಲೆರಡು ಪಂದ್ಯಗಳಲ್ಲಿ 199 ಹಾಗೂ 150 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿರುವ ಇಂಗ್ಲೆಂಡ್ ಬುಧವಾರ ಟ್ವೆಂಟಿ-20 ಕ್ರಿಕೆಟ್ನಲ್ಲಿ 2ನೇ ಕನಿಷ್ಠ ಮೊತ್ತಕ್ಕೆ ಆಲೌಟಾಗಿದೆ.