ಡೆಲ್ ಪೊಟ್ರೊ, ರಾವೊನಿಕ್ ಕ್ವಾ. ಫೈನಲ್ಗೆ
ಮಿಯಾಮಿ, ಮಾ.28: ಅರ್ಜೆಂಟೀನದ ಜುಯಾನ್ ಮಾರ್ಟಿನ್ ಡೆಲ್ ಪೊಟ್ರೊ ಹಾಗೂ ಕೆನಡಾದ ಮಿಲೊಸ್ ರಾವೊನಿಕ್ ಪುರುಷರ ಸಿಂಗಲ್ಸ್ನಲ್ಲಿ ಕ್ವಾರ್ಟರ್ ಫೈನಲ್ಗೆ ತಲುಪಿದ್ದಾರೆ.
ಇಲ್ಲಿ ಬುಧವಾರ ನಡೆದ ಪುರುಷರ ಸಿಂಗಲ್ಸ್ ನ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಡೆಲ್ ಪೊಟ್ರೊ ಸರ್ಬಿಯದ ಫಿಲಿಪ್ ಕ್ರಾಜಿನೊವಿಕ್ ವಿರುದ್ಧ 6-4, 6-2 ನೇರ ಸೆಟ್ಗಳಿಂದ ಜಯ ಸಾಧಿಸಿದರು.
ಡೆಲ್ಪೊಟ್ರೊ ಅಂತಿಮ-8ರ ಸುತ್ತಿನಲ್ಲಿ ಕೆನಡಾದ ರಾವೊನಿಕ್ರನ್ನು ಎದುರಿಸಲಿದ್ದಾರೆ. ರಾವೊನಿಕ್ ಫ್ರಾನ್ಸ್ನ ಜೆರೆಮಿ ಚಾರ್ಡಿ ಅವರನ್ನು 6-3, 6-4 ನೇರ ಸೆಟ್ಗಳಿಂದ ಸೋಲಿಸಿದ್ದಾರೆ.
ಇಂಡಿಯನ್ ವೆಲ್ಸ್ ಟೂರ್ನಿಯ ಸೆಮಿ ಫೈನಲ್ನಲ್ಲಿ ಡೆಲ್ ಪೊಟ್ರೊಗೆ ಸೋತಿರುವ ರಾವೊನಿಕ್ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.
ಇದೇ ವೇಳೆ, ಎರಡನೇ ಶ್ರೇಯಾಂಕದ ಮರಿನ್ ಸಿಲಿಕ್ ಅಮೆರಿಕದ ಜಾನ್ ಇಸ್ನೆರ್ ವಿರುದ್ಧ 6-7(7/0), 3-6 ಸೆಟ್ಗಳಿಂದ ಸೋತಿದ್ದಾರೆ.
ಕೇವಲ 87 ನಿಮಿಷಗಳ ಆಟದಲ್ಲಿ ಕ್ರೊಯೇಷಿಯದ ಸಿಲಿಕ್ ಅವರ ಗೆಲುವಿನ ಓಟಕ್ಕೆ ಕಡಿವಾಣ ಹಾಕಿರುವ ಇಸ್ನೆರ್ ಕ್ವಾರ್ಟರ್ ಫೈನಲ್ನಲ್ಲಿ ದಕ್ಷಿಣ ಕೊರಿಯಾದ 19ನೇ ಶ್ರೇಯಾಂಕದ ಚುಂಗ್ ಹಿಯೊನ್ರನ್ನು ಎದುರಿಸಲಿದ್ದಾರೆ.