ಸನ್ರೈಸರ್ಸ್ ಹೈದರಾಬಾದ್ಗೆ ವಿಲಿಯಮ್ಸನ್ ನಾಯಕ
ಹೊಸದಿಲ್ಲಿ, ಮಾ.29: ನ್ಯೂಝಿಲೆಂಡ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.
ಆಸ್ಟೇಲಿಯ ಕ್ರಿಕೆಟಿಗ ಡೇವಿಡ್ ವಾರ್ನರ್ರಿಂದ ತೆರವಾದ ನಾಯಕನ ಸ್ಥಾನಕ್ಕೆ ವಿಲಿಯಮ್ಸನ್ರನ್ನು ಆಯ್ಕೆ ಮಾಡಲಾಗಿದೆ ಎಂದು ಹೈದರಾಬಾದ್ ಫ್ರಾಂಚೈಸಿ ತಿಳಿಸಿದೆ.
ಕಳೆದ ವಾರ ಕೇಪ್ಟೌನ್ನಲ್ಲಿ ನಡೆದ ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿ ಕ್ರಿಕೆಟ್ ಆಸ್ಟ್ರೇಲಿಯ ವಾರ್ನರ್ ಹಾಗೂ ಆಸ್ಟ್ರೇಲಿಯ ನಾಯಕ ಸ್ಟೀವನ್ ಸ್ಮಿತ್ಗೆ 1 ವರ್ಷ ನಿಷೇಧ ಹೇರಿತ್ತು. ಇದರ ಬೆನ್ನಿಗೇ ಬಿಸಿಸಿಐ 11ನೇ ಆವೃತ್ತಿಯ ಐಪಿಎಲ್ನಿಂದ ಈ ಇಬ್ಬರು ಆಟಗಾರರನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ರಾಜಸ್ಥಾನ ಹಾಗೂ ಹೈದರಾಬಾದ್ ತಂಡಗಳಿಗೆ ಬೇರೆ ನಾಯಕನನ್ನು ಆಯ್ಕೆ ಮಾಡುವುದು ಅನಿವಾರ್ಯವಾಗಿತ್ತು.
ರಾಜಸ್ಥಾನ ತಂಡಕ್ಕೆ ಸ್ಮಿತ್ ಬದಲಿಗೆ ಅಜಿಂಕ್ಯ ರಹಾನೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ಐಪಿಎಲ್ ಎ.7 ರಿಂದ ಆರಂಭವಾಗಲಿದೆ.
Next Story