ಜಾನ್ ಇಸ್ನೇರ್ -ಜ್ವೆರೆವ್ ಫೈನಲ್ಗೆ
ಮಿಯಾಮಿ ಓಪನ್
ಮಿಯಾಮಿ, ಮಾ.31:ಮಿಯಾಮಿ ಓಪನ್ ಟೆನಿಸ್ ಟೂರ್ನಮೆಂಟ್ನ ಪುರುಷರ ವಿಭಾಗದ ಸಿಂಗಲ್ಸ್ನಲ್ಲಿ ಅಮೆರಿಕ ಜಾನ್ ಇಸ್ನೇರ್ ಮತ್ತು ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಫೈನಲ್ ತಲುಪಿದರು.
ಇಂದು ನಡೆದ ಸೆಮಿಫೈನಲ್ನಲ್ಲಿ ಜಾನ್ ಇಸ್ನೇರ್ ಅವರು ಅರ್ಜೆಂಟೀನದ ಆಟಗಾರ ಜುವಾನ್ ಮಾರ್ಟಿನ್ ಡೆಲ್ ಪೊಟ್ರೋ ಅವರನ್ನು ಮಣಿಸಿ ಫೈನಲ್ ಪ್ರವೇಶಿಸಿದರು.
ಇಸ್ನೇರ್ ಅವರು ಡೆಲ್ ಪೊಟ್ರೋ ಅವರನ್ನು 6-1, 7-6(7/2) ಅಂತರದಲ್ಲಿ ಮಣಿಸಿ ಫೈನಲ್ನಲ್ಲಿ ಅವಕಾಶ ದೃಢಪಡಿಸಿದರು.
ಪುರುಷರ ವಿಭಾಗದ ಸಿಂಗಲ್ಸ್ನ ಇನ್ನೊಂದು ಸೆಮಿಫೈನಲ್ನಲ್ಲಿ ಜ್ವೆರೆವ್ ಅವರು ಸ್ಪೇನ್ನ ಪಾಬ್ಲೊ ಕ್ಯಾರೆನೊ ಬುಸ್ಟಾ ಅವರನ್ನು 7-6(4), 6-2 ಅಂತರದಲ್ಲಿ ಸೋಲಿಸಿ ಫೈನಲ್ ತಲುಪಿದರು.
Next Story