ಸ್ಟೀಫನ್ಸ್ ಗೆ ಮಿಯಾಮಿ ಸಿಂಗಲ್ಸ್ ಟ್ರೋಫಿ
ಮಿಯಾಮಿ, ಎ.1: ಲಾಟ್ವಿಯದ ಜೆಲೆನಾ ಒಸ್ಟಾಪೆಂಕೊರನ್ನು ಮಣಿಸಿದ ಅಮೆರಿಕದ ಸ್ಲೊವಾನೆ ಸ್ಟೀಫನ್ಸ್ ಮಿಯಾಮಿ ಓಪನ್ನಲ್ಲಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಇಲ್ಲಿ ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ನ ಫೈನಲ್ ಪಂದ್ಯದಲ್ಲಿ ಸ್ಟೀಫನ್ಸ್ ಅವರು ಒಸ್ಟಾಪೆಂಕೊರನ್ನು 7-6(5), 6-1 ಸೆಟ್ಗಳಿಂದ ಸೋಲಿಸಿದ್ದಾರೆ.
ಮೊದಲ ಸೆಟ್ನಲ್ಲಿ ಒತ್ತಡ ಎದುರಿಸಿದ ಯುಎಸ್ ಓಪನ್ ಚಾಂಪಿಯನ್ ಸ್ಟೆಫನ್ಸ್ 2ನೇ ಸೆಟ್ನಲ್ಲಿ ಸತತ ಆರು ಗೇಮ್ಸ್ಗಳನ್ನು ಜಯಿಸಿ ಫ್ರೆಂಚ್ ಓಪನ್ ಚಾಂಪಿಯನ್ ಒಸ್ಟಾಪೆಂಕೊರನ್ನು ಮಣಿಸುವುದರೊಂದಿಗೆ ಮೊದಲ ಬಾರಿ ಮಿಯಾಮಿ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಮಿಯಾಮಿ ಓಪನ್ನಲ್ಲಿ 13ನೇ ಶ್ರೇಯಾಂಕ ಪಡೆದಿದ್ದ ಸ್ಟೀಫನ್ಸ್ ಸೋಮವಾರ ಬಿಡುಗಡೆಯಾಗಲಿರುವ ಡಬ್ಲುಟಿಎ ರ್ಯಾಂಕಿಂಗ್ನಲ್ಲಿ 9 ಸ್ಥಾನ ಭಡ್ತಿ ಪಡೆದು ಅಗ್ರ-10ರಲ್ಲಿ ಸ್ಥಾನ ಪಡೆಯಲು ಸಜ್ಜಾಗಿದ್ದಾರೆ.
Next Story