ತೇಜಸ್ವಿನ್ ಶಂಕರ್, ಹಿಮಾ ದಾಸ್ಗೆ 6ನೇ ಸ್ಥಾನ
ತೇಜಸ್ವಿನ್
ಗೋಲ್ಡ್ಕೋಸ್ಟ್, ಎ.11: ಇಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ನ ಪುರುಷರ ಎತ್ತರ ಜಿಗಿತದಲ್ಲಿ ಭಾರತದ ತೇಜಸ್ವಿನ್ ಶಂಕರ್ ಮತ್ತು ಮಹಿಳೆಯರ 400 ಮೀಟರ್ ಓಟದಲ್ಲಿ ಹಿಮಾ ದಾಸ್ 6ನೇ ಸ್ಥಾನ ಪಡೆದಿದ್ದಾರೆ.
ಎತ್ತರ ಜಿಗಿತದ ಫೈನಲ್ನಲ್ಲಿ ಮೂರನೇ ಯತ್ನದಲ್ಲಿ ತೇಜಸ್ವಿನ್ 2.27 ಮೀಟರ್ ಎತ್ತರ ಜಿಗಿಯುವಲ್ಲಿ ವಿಫಲರಾದರು. 2.24 ಮೀಟರ್ ಸಾಧನೆಯೊಂದಿಗೆ 6ನೇ ಸ್ಥಾನ ಪಡೆದರು. ಎ.9ರಂದು ತೇಜಸ್ವಿನ್ 2.21 ಮೀಟರ್ ಸಾಧನೆಯೊಂದಿಗೆ ಫೈನಲ್ ತಲುಪಿದ್ದರು.
ಆಸ್ಟ್ರೇಲಿಯದ ಬ್ರೆಂಡನ್ ಸ್ಟಾರ್ಕ್(2.32 ಮೀ) ಚಿನ್ನ, ಜಮಾಲ್ ವಿಲ್ಸನ್(2.30 ಮೀ ) ಬೆಳ್ಳಿ ಮತ್ತು ಜಾಂಗೊ ಲೊವೆಟ್ ಕಂಚು ಪಡೆದರು.
ಮಹಿಳೆಯರ 400 ಮೀಟರ್ ಓಟದಲ್ಲಿ ಹಿಮಾ ದಾಸ್ 51.53 ಸೆಕೆಂಡ್ಗಳಲ್ಲಿ ಗುರಿ ತಲುಪಿ 6ನೇ ಸ್ಥಾನ ಗಿಟ್ಟಿಸಿಕೊಂಡರು. ಮಹಿಳೆಯರ ಉದ್ದ ಜಿಗಿತದಲ್ಲಿ ವಿ .ನೀನಾ (6.24 ಮೀ) ಮತ್ತು ನಯನಾ ಜೇಮ್ಸ್(6.34 ಮೀ) ಫೈನಲ್ ತಲುಪಿದ್ದಾರೆ.
Next Story