ಡಬಲ್ಸ್ ಪ್ರಶಸ್ತಿ ಜಯಿಸಿದ ಬಾತ್ರಾ-ದಾಸ್
ಟೇಬಲ್ ಟೆನಿಸ್
ಗೋಲ್ಡ್ಕೋಸ್ಟ್, ಎ.13: ಭಾರತದ ಮಹಿಳಾ ಡಬಲ್ಸ್ ಜೋಡಿ ಮಾನಿಕಾ ಬಾತ್ರಾ ಹಾಗೂ ವೌಮಾ ದಾಸ್ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ತಂಡಕ್ಕೆ ಮೂರನೇ ಪದಕ ಗೆದ್ದುಕೊಟ್ಟಿದೆ.
ಬಾತ್ರಾ ಹಾಗೂ ದಾಸ್ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಸಿಂಗಾಪುರದ ಟೈನ್ವೀ ಫೆಂಗ್ ಹಾಗೂ ಮಿಂಗ್ಯು ವಿರುದ್ಧ 0-3 (5-11, 4-11,5-11)ಅಂತರದಿಂದ ಸೋತಿದ್ದಾರೆ.
ಮಲೇಷ್ಯಾದ ಯಿಂಗ್ ಹೋ ಹಾಗೂ ಕರೆನ್ ಲಿನ್ ವಿರುದ್ಧ 3-0 ಅಂತರದಿಂದ ಜಯ ಸಾಧಿಸುವುದರೊಂದಿಗೆ ಭಾರತ ಫೈನಲ್ಗೆ ಪ್ರವೇಶಿಸಿತ್ತು. ಭಾರತ ಗೋಲ್ಡ್ಕೋಸ್ಟ್ ಗೇಮ್ಸ್ನ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಮೂರನೇ ಪದಕ ಗೆದ್ದುಕೊಂಡಿದೆ. ಕಳೆದ ಸೋಮವಾರ ನೈಜೀರಿಯ ವಿರುದ್ಧ 3-0 ಅಂತರದಿಂದ ಜಯ ಸಾಧಿಸುವುದರೊಂದಿಗೆ ಭಾರತದ ಪುರುಷರ ತಂಡ ಚಿನ್ನದ ಪದಕ ಜಯಿಸಿದೆ.
ಈ ವರ್ಷ ಟೈಮ್ಸ್ ಆಫ್ ಇಂಡಿಯಾ ಕ್ರೀಡಾ ಪ್ರಶಸ್ತಿ ಜಯಿಸಿರುವ ಬಾತ್ರಾ ಶನಿವಾರ ಮಹಿಳೆಯರ ಸಿಂಗಲ್ಸ್ನಲ್ಲಿ ಫೆಂಗ್ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯ ಆಡಲಿದ್ದಾರೆ.
Next Story