ಬಾಕ್ಸಿಂಗ್: ತನ್ವರ್ಗೆ ಕಂಚು
ಗೋಲ್ಡ್ಕೋಸ್ಟ್, ಎ.13: ಕಾಮನ್ವೆಲ್ತ್ ಗೇಮ್ಸ್ನ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪುರುಷರ 91 ಕೆ.ಜಿ. ಸೆಮಿಫೈನಲ್ನಲ್ಲಿ ಭಾರತದ ನಮನ್ ತನ್ವರ್ ಆಸ್ಟ್ರೇಲಿಯದ ಜೇಸನ್ ವಾಟ್ಲೆ ವಿರುದ್ಧ ಸೋತಿದ್ದಾರೆ. ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.
ಶುಕ್ರವಾರ ನಡೆದ 46-49 ಕೆ.ಜಿ. ತೂಕ ವಿಭಾಗದ ಸೆಮಿ ಫೈನಲ್ನಲ್ಲಿ ಉಗಾಂಡದ ಜುಮಾ ಮಿರೊರನ್ನು ಮಣಿಸಿದ ಅಮಿತ್ ಫಾಂಗಲ್ ಫೈನಲ್ಗೆ ತಲುಪಿದ್ದಾರೆ. ಫೈನಲ್ನಲ್ಲಿ ಇಂಗ್ಲೆಂಡ್ನ ಗಲಾಲ್ ಯಫೈ ಅವರನ್ನು ಎದುರಿಸಲಿದ್ದಾರೆ.
52 ಕೆಜಿ ತೂಕ ವಿಭಾಗದಲ್ಲಿ ಶ್ರೀಲಂಕಾದ ಇಶಾನ್ ಬಂಡಾರರನ್ನು ಬಹುಮತದ ತೀರ್ಪಿನಿಂದ ಮಣಿಸಿದ ಗೌರವ್ ಸೋಳಂಕಿ ಫೈನಲ್ಗೆ ತಲುಪಿದ್ದು, ಶನಿವಾರ ನಡೆಯಲಿರುವ ಫೈನಲ್ನಲ್ಲಿ ಉತ್ತರ ಐರ್ಲೆಂಡ್ನ ಬ್ರೆಂಡನ್ ಇರ್ವಿನ್ರನ್ನು ಎದುರಿಸಲಿದ್ದಾರೆ. ಮನೀಶ್ ಕೌಶಿಕ್ ಪುರುಷರ 60 ಕೆಜಿ ತೂಕ ವಿಭಾಗದಲ್ಲಿ ಉತ್ತರ ಐರ್ಲೆಂಡ್ನ ಜೇಮ್ಸ್ ಮೆಕ್ಗಿವರ್ನ್ರನ್ನು ಬಹುಮತದ ತೀರ್ಪಿನಿಂದ ಸೋಲಿಸಿದ್ದಾರೆ. ಕೌಶಿಕ್ ಫೈನಲ್ನಲ್ಲಿ ಆಸ್ಟ್ರೇಲಿಯದ ಹ್ಯಾರಿ ಗಾರ್ಸೈಡ್ ಎದುರಿಸಲಿದ್ದಾರೆ.
Next Story