ವಿನೇಶ್, ಸುಮಿತ್ಗೆ ಸ್ವರ್ಣ: ಭಾರತಕ್ಕೆ 52 ಪದಕ
ಸಾಕ್ಷಿ ಮಲಿಕ್ಗೆ ಕಂಚು
ಗೋಲ್ಡ್ಕೋಸ್ಟ್, ಎ.14: ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕುಸ್ತಿ ಸ್ಪರ್ಧೆಯಲ್ಲಿ ವಿನೇಶ್ ಪೋಗಟ್ ಹಾಗೂ ಸುಮಿತ್ ಸ್ವರ್ಣ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ಭಾರತ ಪದಕ ಪಟ್ಟಿಯಲ್ಲಿ 50ಕ್ಕೂ ಅಧಿಕ ಪದಕ ಗೆದ್ದುಕೊಂಡಿದೆ.
ಶನಿವಾರ ನಡೆದ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ವಿಭಾಗದ ಫೈನಲ್ನಲ್ಲಿ ವಿನೇಶ್ ಕೆನಡಾದ ಜೆಸ್ಸಿಕಾ ಮೆಕ್ಡೊನಾಲ್ಡ್ರನ್ನು 10-3 ರಿಂದ ಮಣಿಸಿ ಚಿನ್ನ ಜಯಿಸಿದರು. ವಿನೇಶ್ ಚಿನ್ನ ಜಯಿಸಿದ ಭಾರತದ ಮಹಿಳಾ ಕುಸ್ತಿಪಟು ಎನಿಸಿಕೊಂಡರು. ವಿನೇಶ್ 10ನೇ ದಿನವಾದ ಶನಿವಾರ ಭಾರತಕ್ಕೆ 23ನೇ ಚಿನ್ನ ಗೆದ್ದುಕೊಟ್ಟರು.
ರಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕವನ್ನು ಜಯಿಸಿದ್ದ ಕುಸ್ತಿತಾರೆ ಸಾಕ್ಷಿ ಮಲಿಕ್ ಮಹಿಳೆಯರ 62 ಕೆಜಿ ಫ್ರೀಸ್ಟೈಲ್ನಲ್ಲಿ ನ್ಯೂಝಿಲೆಂಡ್ನ ಟೇಲಾ ಫೋರ್ಡ್ರನ್ನು ಮಣಿಸಿ ಕಂಚಿನ ಪದಕ ಜಯಿಸಿದರು.
ಪುರುಷರ ಫ್ರೀಸ್ಟೈಲ್ 125 ಕೆಜಿ ತೂಕ ವಿಭಾಗದ ಫೈನಲ್ನಲ್ಲಿ ನೈಜೀರಿಯದ ಸಿನಿವೀ ಬೋಲ್ಟಿಕ್ ಗಾಯಗೊಂಡು ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ಸುಮಿತ್ ಚಿನ್ನದ ಪದಕದ ಪಡೆದರು. ಸುಮಿತ್ ಚಿನ್ನ ಜಯಿಸುವುದರೊಂದಿಗೆ ಭಾರತ ಪದಕ ಪಟ್ಟಿಯಲ್ಲಿ ಅರ್ಧಶತಕ ಬಾರಿಸಿತು.